ದಕ್ಷಿಣ ಶಿಕ್ಷಕರ ಕ್ಷೇತ್ರ : ಕಾಂಗ್ರೆಸ್‌, ಮೈತ್ರಿ ಅಭ್ಯರ್ಥಿಗೆ ಖಾಸಗಿ ಶಾಲೆಗಳ ಒಕ್ಕೂಟ ಸೆಡ್ಡು..! ಮೈಸೂರು, ಮೇ.15, 2024 :(.. ) , ಮತ್ತು ವತಿಯಿಂದ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ರಾಧಾಕೃಷ್ಣ ಅವರು ವಿಧಾನಪರಿಷತ್ ಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಸಂಬಂಧ ಇಂದು ರಾಧಕೃಷ್ಣ ಅವರು ಮೈಸೂರಲ್ಲಿ ಸಭೆ ನಡೆಸಿ ಚರ್ಚಿಸಿದ್ದು ನಾಮಪತ್ರ ಸಲ್ಲಿಕೆಗೆ ತೀರ್ಮಾನಿಸಿದ್ದಾರೆ. ಈ ಕುರಿತು ʼ ಜಸ್ಟ್ ಕನ್ನಡʼ ಜತೆ ಮಾತನಾಡಿರುವ ರಾಮಕೃಷ್ಣ ಅವರು ಹೇಳಿದಿಷ್ಟು.. ಖಾಸಗಿಶಾಲೆಗಳ ಸಮಸ್ಯೆಗೆ ಸರಕಾರದ ಮಟ್ಟದಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಹೀಗಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಖಾಸಗಿ ಶಾಲೆಗಳಿಂದ ಒತ್ತಡವಿದೆ. ಈ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಒಂದು ಸುತ್ತಿನ ಸಭೆ ನಡೆಸಲಾಗಿದೆ. ನಾಮಪತ್ರ ಸಲ್ಲಿಕೆಗೆ ನಾಳೆಯೇ ಕಡೆಯ ದಿನವಾದ್ದರಿಂದ ಅಗತ್ಯ ಸಿದ್ಧತೆ ನಡೆಸಲಾಗಿದೆ. ಖಾಸಗಿ ಶಾಲೆಗಳ ಒಕ್ಕೂಟದಲ್ಲಿ 300 ಶಾಲೆಗಳಿದ್ದು ಒಟ್ಟು 6500 ಶಿಕ್ಷಕರು ಮತದಾರರಿದ್ದಾರೆ. ಈ ಮತದಾರರೇ ನಮ್ಮ ಶಕ್ತಿಯಾಗಿದ್ದು, ಖಾಸಗಿ ಶಾಲೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ತೀರ್ಮಾನ ಬೆಂಬಲಿಸುವಂತೆ ಈ ಶಿಕ್ಷಕರ ಮನವೊಲಿಸಲಾಗುತ್ತದೆ. ಖಾಸಗಿ ಶಾಲೆಶಿಕ್ಷಕರು ಕೈ ಹಿಡಿದಲ್ಲಿ ಗೆಲವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. : , , , : ’ : ’ , , , , ’ . 300 ’ 6,500 . , . , .