ಅಕ್ರಮವಾಗಿ ಜಾನುವಾರು ಸಾಗಾಟ : ಕಂಟೇನರ್ ವಶ, ಇಬ್ಬರ ಬಂಧನ. ಮೈಸೂರು, ಸೆ.25,2024: (..) ಅಕ್ರಮವಾಗಿ ಒಂದೇ ಕಂಟೈನರ್‌ನಲ್ಲಿ 42 ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹುಣಸೂರು ತಾಲೂಕಿನ ರತ್ನಪುರಿ ಹಾಗೂ ಚಾಮರಾಜನಗರದ ಇಬ್ಬರನ್ನು ಬಂಧಿಸಿರುವ ತಾಲೊಕಿನ ಬಿಳಿಕೆರೆ ಠಾಣಾ ಪೊಲೀಸರು ವಾಹನ ವಶಕ್ಕೆ ಪಡೆದಿದ್ದಾರೆ. ಹುಣಸೂರು ತಾಲೂಕಿನ ರತ್ನಪುರಿಯಿಂದ ಕೆ.ಆರ್.ನಗರ, ಗೊಮ್ಮಟಗಿರಿ ಮಾರ್ಗವಾಗಿ ಮೈಸೂರು ಕಡೆಗೆ ಕಂಟೈನರ್‌ನಲ್ಲಿ ಜಾನುವಾರುಗಳನ್ನು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬೆನ್ನಟ್ಟಿ ಮನುಗನಹಳ್ಳಿ ಬಳಿಯಲ್ಲಿ ವಾಹನವನ್ನು ಅಡ್ಡಗಟ್ಟಿ ತಡೆದು ಪರಿಶೀಲಿಸಲಾಯಿತು. ಈ ವೇಳೆ 42 ಜಾನುವಾರುಗಳು ಪತ್ತೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕರುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಚಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಜಾನುವಾರುಗಳನ್ನು ಬಂಧಮುಕ್ತಗೊಳಿಸಿ ಪಿಂಜಾರಾಪೋಲ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. : , , , .