ಮಾಜಿ ಸಚಿವ ಬಿ.ಡಿ.ಬಸವರಾಜ್ ನಿಧನ… ಹಾಸನ,ಮಾರ್ಚ್,22,2021(..):ಮಾಜಿ ಸಚಿವ ಬಿ.ಡಿ.ಬಸವರಾಜ್ ನಿಧನರಾಗಿದ್ದಾರೆ. ಮಾಜಿ ಸಚಿವ ಹಾಗೂ ಜೆ.ಡಿ‌.ಎಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಹಲವಾರು ಮುಖಂಡರನ್ನು ಬೆಳೆಸಿದ ನೇರ ನುಡಿ ನಾಯಕರಾಗಿದ್ದ ಬಿ ಡಿ ಬಸವರಾಜ್ ರವರು ಇಂದು ಹಾಸನ ಜಿಲ್ಲೆಯ ಬಾಳ್ಳುಪೇಟೆಯಲ್ಲಿ ನಿಧನ( 85)ರಾದರು. ಬಿ.ಡಿ.ಬಸವರಾಜ್ ಅವರು ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ದೇವೇಗೌಡರ ವಿರುದ್ಧ ಬಂಡಾಯವೆದ್ದು, ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ. : - -