2023ಕ್ಕೆ ಮತ್ತೆ ಕುಮಾರಸ್ವಾಮಿ‌ ಕಾಲು ಹಿಡಿಯುವ ಸ್ಥಿತಿ ಬರುತ್ತೆ‌- ಎಲ್.ಆರ್ ಶಿವರಾಮೇಗೌಡ… ಮೈಸೂರು,ಮಾರ್ಚ್,22,2021(..):ನಮ್ಮ ಪಕ್ಷದ ಹಣೆ ಬರಹವೇ ಇಷ್ಟು. 2018 ರಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ ಅಂದ್ರೆ ನಗುತ್ತಿದ್ರು. ಕುಮಾರಸ್ವಾಮಿ ಹುಡುಕಿಕೊಂಡು ಬರುವ ಸ್ಥಿತಿ ಬಂತು. ಈಗಲು ಅಷ್ಟೇ 2023 ಕ್ಕೆ ಮತ್ತೆ ಕುಮಾರಸ್ವಾಮಿ‌ ಕಾಲು ಹಿಡಿಯುವ ಸ್ಥಿತಿ ಬರುತ್ತೆ‌ ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಭವಿಷ್ಯ ನುಡಿದಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ, ನಾಗಮಂಗಲದಲ್ಲಿ ಈ ಬಾರಿ ನಾನೇ ರಂಗ ಕುಣಿಯೋದು. ಶಾಸಕ ಸುರೇಶ್‌ಗೌಡಗೆ ಪರ್ಮನೆಂಟಾಗಿ ನಾಗಮಂಗಲ ಬರೆದುಕೊಟ್ಟಿಲ್ಲ. ಜೆಡಿಎಸ್‌ನಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಸುರೇಶ್‌ಗೌಡ್ರನ್ನ ಎಂಎಲ್‌ಸಿ ಅಥವಾ ಎಂಪಿಗೆ ಕಳಿಸಲಿ ನಮ್ಮದೇನು ಅಭ್ಯಂತರ ಇಲ್ಲ ಎಂದು ಹೇಳಿದರು. : 2023 – –- - .