ಮೇ 1ರಂದು ನಟ ಶಿವರಾಜ್ ಕುಮಾರ್ ಸೇರಿದಂತೆ 4 ಕೊಲೆ ಮಾಡುವುದಾಗಿ ಪತ್ರ : ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಬೆಂಗಳೂರು,ಮಾರ್ಚ್,21,2021(..) :ಮೇ 1ರಂದು ನಟ ಶಿವರಾಜ್ ಕುಮಾರ್, ಶಾಸಕ ಸಿ.ಟಿ.ರವಿ, ಹಿರಿಯ ಪತ್ರಕರ್ತರೊಬ್ಬರು ಸೇರಿದಂತೆ ನನ್ನನ್ನೂ ಕೊಲೆ ಮಾಡುವುದಾಗಿ ಪತ್ರ ಬಂದಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಹೇಳಿದ್ದಾರೆ.ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಪತ್ರಕ್ಕೆ ನಾನು ಹೆದರುವ ಪ್ರಶ್ನೆಯೇ ಇಲ್ಲ. ಕೊಲೆ ಮಾಡುವವರು ಎಲ್ಲಿ ಬೇಕಾದರೂ ಮಾಡುತ್ತಾರೆ. ಅದಕ್ಕೆ ಹೆದರಿ ನಾನು ಸಮಾರಂಭದಲ್ಲಿ ಭಾಗಿಯಾಗುವುದನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. : - - 1st---- - -..