ಮಸ್ಕಿ ಕ್ಷೇತ್ರದ ಅಭಿವೃದ್ಧಿಗೆ ಉಪಚುನಾವಣೆ ಮುಹೂರ್ತವಾಗಿತ್ತೇ..? – ಸಿಎಂ ಬಿಎಸ್ ವೈ ಹೇಳಿಕೆಗೆ ಹೆಚ್.ಡಿ ಕುಮಾರಸ್ವಾಮಿ ಟೀಕೆ… ಬೆಂಗಳೂರು,ಮಾರ್ಚ್,22,2021(..):ಮಸ್ಕಿ ಕ್ಷೇತ್ರದ ಅಭಿವೃದ್ದಿ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ನೀಡಿದ್ದ ಹೇಳಿಕೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಸಿಎಂ @ ಇತ್ತೀಚೆಗೆ ಪ್ರಚಾರ ಸಭೆಯಲ್ಲಿ ಹೇಳಿರುವುದು ಗಮನಕ್ಕೆ ಬಂತು. ಮಸ್ಕಿಯಲ್ಲಿ ಶಾಸಕರಾಗಿದ್ದವರ ಮಹಾತ್ಯಾಗ(?)ದಿಂದ ಬಿಎಸ್‌ವೈ ಅವರಿಗೆ ಅಧಿಕಾರ ಸಿಕ್ಕು 2 ವರ್ಷಗಳಾಗುತ್ತಾ ಬಂದಿವೆ. ಈ ವರೆಗೆ ಯಾಕಾಗಿರಲಿಲ್ಲ ಮಸ್ಕಿಯ ಅಭಿವೃದ್ಧಿ? ಪ್ರಗತಿಗೆ ಉಪಚುನಾವಣೆ ಮುಹೂರ್ತವಾಗಿತ್ತೇ? ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಚುನಾವಣೆ ನಿಗದಿಯಾಗಿದ್ದರಿಂದ ಮಸ್ಕಿ ಅಭಿವೃದ್ಧಿಗೆ ಈಗ ಮುಹೂರ್ತ ಬಂದಿದೆ, ಒಪ್ಪೋಣ. ಆದರೆ, ವರ್ಷದ ಹಿಂದೆಯೇ ಚುನಾವಣೆಗಳಾದ ‘ಬಾಂಬೆ ತಂಡ’ದ ಸದಸ್ಯರ ಕ್ಷೇತ್ರಗಳ ಅಭಿವೃದ್ಧಿ ಎಷ್ಟಾಗಿದೆ? ಅವೆಲ್ಲವೂ ಭೂಲೋಕದ ಸ್ವರ್ಗಗಳಾಗಿವೆಯೇ ಸಿಎಂ ಯಡಿಯೂರಪ್ಪನವರೇ? ಚುನಾವಣಾ ಕಾಲದ ನಿಮ್ಮ ಅಭಿವೃದ್ಧಿಯ ಜಪ ಬೂಟಾಟಿಕೆತನದ್ದು ಎಂದು ನಿಮಗಾದರೂ ಅನಿಸದೇ? ಎಂದು ಸಿಎಂ ಬಿಎಸ್ ವೈಗೆ ಹೆಚ್.ಡಿಕೆ ಚಾಟಿ ಬೀಸಿದ್ದಾರೆ. ಮಸ್ಕಿ ಕ್ಷೇತ್ರವಿರಲಿ, ಬೇರಾವ ಕ್ಷೇತ್ರವೇ ಆಗಿರಲಿ ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವೆಲ್ಲಿದೆ ಮುಖ್ಯಮಂತ್ರಿಗಳೇ? ರಾಜ್ಯದ ತೆರಿಗೆ ಹಣ, ಜನರ ಬೆವರಿನ ಋಣ ನಿಮ್ಮ ಸರ್ಕಾರದಲ್ಲಿರುವ ‘ಏಕಗವಾಕ್ಷಿ’ಗೆ ಆಪೋಷನವಾಗುತ್ತಿಲ್ಲವೇ? ಚುನಾವಣಾ ಕಾಲದಲ್ಲಿ ಮುಖ್ಯಮಂತ್ರಿ ಮತ್ತು ಅವರ ಸರ್ಕಾರದ ‘ಏಕಗವಾಕ್ಷಿ’ ಆಡುವ ಮಾತುಗಳಿಗೆ ಜನ ಮನ್ನಣೆ ನೀಡಬಾರದು ಎಂದು ಹೆಚ್.ಡಿಕೆ ಟ್ವಿಟ್ ಮಾಡಿದ್ದಾರೆ. ….. ‘ ? , . 22, 2021 (..): .. .. ’ .“ .. ’ . ‘ ’ (?) . ’ ? ?” .“ , ‘ ’ ? ? ,” . : –- - - - : –- - - -