ಏಪ್ರಿಲ್ ಅಂತ್ಯಕ್ಕೆ ಕಿಚ್ಚ ಸುದೀಪ್ ಕೋಟಿಗೊಬ್ಬ 3 ರಿಲೀಸ್!? ಬೆಂಗಳೂರು, ಮಾರ್ಚ್ 21, 2021 (..):ಬಹುನಿರೀಕ್ಷೆಯ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಏಪ್ರಿಲ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದಕ್ಕೂ ಮುನ್ನ ಏಪ್ರಿಲ್ 20 ರಂದು ಚಿತ್ರದುರ್ಗದಲ್ಲಿ ಚಿತ್ರ ತಂಡ ಪ್ರಿ ರಿಲೀಸ್ ಈವೆಂಟ್ ಆಯೋಜಿಸಲು ಪ್ಲಾನ್ ಮಾಡಿದೆ ಎನ್ನಲಾಗಿದೆ. ಇನ್ನು ಚಿತ್ರ ಬಿಡುಗಡೆಗೂ ಮೊದಲು ಕೋಟಿಗೊಬ್ಬ3 ಅದ್ಧೂರಿಯಾಗಿ ಪ್ರಿ ರಿಲೀಸ್ ಈವೆಂಟ್ ಆಯೋಜಿಸಲಿದೆ. ಈ ಮೂಲಕ ಇತ್ತೀಚಿನ ಪ್ರಿ ಈವೆಂಟ್ ಟ್ರೆಂಡ್ ಅನ್ನು ಈ ಟೀಂ ಮುಂದುವರಿಸಲಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಡೇಟ್ ಅಧಿಕೃತವಾಗಿ ಬಹಿರಂಗವಾಗುವ ಸಾಧ‍್ಯತೆಯಿದೆ.