ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳು ಕೃಷಿ ಭೂಮಿಗೆ ಸೂಕ್ತ: ಸದುಪಯೋಗಪಡಿಸಿಕೊಳ್ಳುವಂತೆ ರೈತರಿಗೆ ಮನವಿ ಬೆಂಗಳೂರು,ಮಾರ್ಚ್,20,2021(..) :ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವರ್ತೂರು ಕೆರೆಯಲ್ಲಿನ ಹೂಳನ್ನು ಸಾರ್ವಜನಿಕರು ಅಗತ್ಯಕ್ಕನುಸಾರ ತೆಗೆದುಕೊಂಡು ಹೋಗಬಹುದಾಗಿದ್ದು, ಕೆರೆಯ ಸುತ್ತಮುತ್ತಲಿನ ರೈತರು ಇದರ ಸದುಪಯೋಗ ಪಡೆಯುವ ಉದ್ದೇಶದಿಂದ ಬಿಡಿಎ ಸೈಟ್ ಆಫೀಸ್ ಗಳಲ್ಲಿ ಮನವಿ ಸಲ್ಲಿಸಲು ಈ ಮೂಲಕ ಕೋರಲಾಗಿದೆ.ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠದ ಆದೇಶದಂತೆ, ಬೆಂಗಳೂರು ಪೂರ್ವ ತಾಲೂಕು, ವರ್ತೂರು ಹೋಬಳಿ, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ ಹೂಳನ್ನು ತೆಗೆಯಲಾಗಿದ್ದು, ವರ್ತೂರು ಕೆರೆಯಲ್ಲಿನ ಹೂಳಿನ ಗುಣಮಟ್ಟದ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕೆರೆಗಳ ಹೂಳನ್ನು ಕೃಷಿ ಜಮೀನುಗಳಿಗೆ ಉಪಯೋಗಿಸಲು ಸೂಕ್ತವಾಗಿದೆ ಎಂದು ವರದಿ ನೀಡಿದ್ದಾರೆ. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ಸಹಾಯಕ ಅಭಿಯಂತರರು (9448600709), ಸಹಾಯಕ ಕಾರ್ಯಪಾಲಕ ಅಭಿಯಂತರರು (9743938431) ಮತ್ತು ಕಾರ್ಯಪಾಲಕ ಅಭಿಯಂತರರು (7349524895) ಸಂಪರ್ಕಿಸಬಹುದಾಗಿದೆ. …. : , . 20, 2021 (..): . . . . , (9448600709), (9743938431), (7349584895).: / / / : -- - --