ಮೈಮುಲ್ ಚುನಾವಣೆಯಲ್ಲಿ ನನ್ನ ಮಗನಿಗೆ ನಮ್ಮ ಪಕ್ಷದ ನಾಯಕರ ಬೆಂಬಲ ಸಿಗಲಿಲ್ಲ- ಶಾಸಕ ಕೆ.ಮಹದೇವ್ ಮೈಸೂರು,ಮಾರ್ಚ್,19,2021(..):ಮೈಮುಲ್ ಚುನಾವಣೆಯಲ್ಲಿ ನನ್ನ ಮಗನಿಗೆ ನಮ್ಮ ಪಕ್ಷದ ನಾಯಕರ ಬೆಂಬಲ ಸಿಗಲಿಲ್ಲ. ಇದರ ನೋವು ನನಗೂ ಇದೆ, ಕಾರ್ಯಕರ್ತರಿಗೂ ಇದೆ ಎಂದು ಪಿರಿಯಾಪಟ್ಟಣದ ಜೆಡಿಎಸ್ ಶಾಸಕ ಕೆ. ಮಹದೇವ್ ಬೇಸರ ವ್ಯಕ್ತಪಡಿಸಿದರು. ಈ ಕುರಿತು ಇಂದು ಮಾದ್ಯಮಗಳ ಜತೆ ಮಾತನಾಡಿದ ಶಾಸಕ ಕೆ.ಮಹದೇವ್, ಮೈಮುಲ್ ಚುನಾವಣೆಯಲ್ಲಿ ನನ್ನ ಮಗನಿಗೆ ನಮ್ಮ ಪಕ್ಷದ ನಾಯಕರೇ ಬೆಂಬಲ ನೀಡಲಿಲ್ಲ. ಆದರೆ ಇದನ್ನ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಮೈಮುಲ್ ಚುನಾವಣೆ ರಾಜಕೀಯೇತರ ಚುನಾವಣೆ ಆಗಿದೆ. ಆ ಚುನಾವಣೆಯಲ್ಲಿ ನನ್ನ ಮಗ ನಿಂತು ಗೆದ್ದಿರುವುದು ಸಂತೋಷವಾಗಿದೆ. ಇದಕ್ಕೆ ಕಾರಣವಾದ ಎಲ್ಲ ಹಾಲಿನ ಡೈರಿ ಸದಸ್ಯರಿಗೂ ಧನ್ಯವಾದ ಹೇಳುತ್ತೇನೆ ಎಂದರು. ಚುನಾವಣೆಗೆ ನಿಂತಮೇಲೆ ಸೋಲಿಸೋಕೆ ಪ್ರಯತ್ನ ಪಡೋದು ಸಹಜ. ಅದರ ಮಧ್ಯಯೇ ಎಲ್ಲರು ನನ್ನ ಮಗನ ಮೇಲೆ ವಿಶ್ವಾಸ ಇಟ್ಟಿದ್ದು ಖುಷಿ ತಂದಿದೆ ಎಂದು ಶಾಸಕ ಕೆ. ಮಹದೇವ್ ಸಂತಸ ವ್ಯಕ್ತಪಡಿಸಿದರು. : - - - - - – - . .