ಕೈ ತಪ್ಪಿದ ಬಿ ಫಾರಂ : ಸಂಜೆ ಶಿಕ್ಷಕರ ಸಭೆ ಕರೆದ ಕ.ಟಿ.ಶ್ರೀಕಂಠೇಗೌಡ, ಬಂಡಾಯದ ಮುನ್ಸೂಚನೆ..! ಮೈಸೂರು, ಮೇ.15, 2024 : (..) ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳ ಪೈಕಿ ನಾನೊಬ್ಬನೇ ರಿಯಲ್‌ ʼ ಶಿಕ್ಷಕʼ ಎಂದ ಜೆಡಿಎಸ್‌ ನ ಕೆ.ಟಿ.ಶ್ರೀಕಂಠೇಗೌಡ , ಟಿಕೆಟ್‌ ಕೈ ತಪ್ಪಿದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ವಿವೇಕಾನಂದ ಅವರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ ದೇವೇಗೌಡ ಇಂದು ಬೆಳಗ್ಗೆ ಬಿ ಫಾರಂ ನೀಡಿದರು. ಈ ವೇಲೆ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ ಟಿ ದೇವಗೌಡ, ನಿರಂಜನ್ ಮೂರ್ತಿ, ನಾಗಣ್ಣ ಗೌಡರು ಉಪಸ್ಥಿತರಿದ್ದರು. ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ʼ ಮೈತ್ರಿ ಅಭ್ಯರ್ಥಿ ʼ ಟಿಕೆಟ್‌ ಗೊಂದಲ ಮುಂದುವರೆದಿರುವ ಸಂದರ್ಭದಲ್ಲೇ ಜೆಡಿಎಸ್‌ ಬಿಫಾರಂ ನೀಡಿದೆ. ಬಿಜೆಪಿ ಅಭ್ಯರ್ಥಿ ಡಾ.ಈ.ಸಿ.ನಿಂಗರಾಜೇಗೌಡ ಅವರು ನಾನೇ ಮೈತ್ರಿ ಅಭ್ಯರ್ಥಿ. ನಾಮಪತ್ರ ಸಲ್ಲಿಸುವೆ ಎಂದು ಪ್ರಕಟಿಸಿದ್ದಾರೆ. ಈ ನಡುವೆ ಜೆಡಿಎಸ್‌ ನಲ್ಲೂ ಟಿಕೆಟ್‌ ಗಾಗಿ ಪೈಪೋಟಿ ಶುರುವಾಗಿದೆ. ಜೆಡಿಎಸ್‌ ನ ಬಿಫಾರಂ ನೀಡಿದ ಬೆನ್ನಲ್ಲೇ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಸಮಧಾನಗೊಂಡಿದ್ದಾರೆ. ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಕೆಟಿಎಸ್‌ ಹೇಳಿದಿಷ್ಟು.. ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವ ಅರ್ಹತೆ ನನಗಿದೆ. ಹಾಗೆ ನೋಡಿದರೆ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗಿಂತಲೂ ನನಗೆ ಹೆಚ್ಚು ಅರ್ಹತೆ ಇರುವುದು. ಕಾರಣ ನಾನು ಒಬ್ಬ ಶಿಕ್ಷಕ. ೬ ವರ್ಷಗಳ ಶಿಕ್ಷಕ ಅನುಭವದ ಜತೆಗೆ ಕಳೆದ ೨೯ ವರ್ಷಗಳಿಂದ ಪ್ರಾಂಶುಪಾಲರ ಸಂಘದ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿರುವೆ. ಈ ಕ್ಷೇತ್ರದ ಸಂಪೂರ್ಣ ಆಗುಹೋಗುಗಳ ಬಗ್ಗೆ ಸಮಗ್ರ ಮಾಹಿತಿ ನನಗಿದೆ. ಆದ್ದರಿಂದ ಇಂದು ಸಂಜೆ ೪ ಗಂಟೆಗೆ ಶಿಕ್ಷಕರ ಸಭೆ ಕರೆದಿರುವೆ. ಆ ಸಭೆಯಲ್ಲಿ ಶಿಕ್ಷಕರು ಏನು ನಿರ್ದೇಶನ ನೀಡುವರು ಅದರಂತೆ ಮುಂದಡಿ ಇಡುವೆ. ವರಿಷ್ಠರ ನಿರ್ಧಾರಕ್ಕೆ ಸಮ್ಮತಿಸಿ ಸುಮ್ಮನಿರುವಂತೆ ಹೇಳಿದರೆ ಸುಮ್ಮನಿರುವೆ. ಒಂದು ವೇಳೆ , ನಿಮಗೆ ಅನ್ಯಾಯವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದು ಸೂಚಿಸಿದರೆ ಅದಕ್ಕೂ ಸಿದ್ಧವಿರುವೆ ಎಂದು ಕೆ.ಟಿ.ಶ್ರೀಕಂಠೇಗೌಡ ಸ್ಪಷ್ಟಪಡಿಸಿದರು. : .. , ’ , , : .. () “” ’ . () , , ’ . () .. , , . ’ . , . . ’ 29 6 . . .. .