ಚಿನ್ನದ ವ್ಯಾಪಾರಿಯ ಕಾರು ತಡೆದು ಹಲ್ಲೆ ನಡೆಸಿ ದರೋಡೆ… ಮೈಸೂರು,ಮಾರ್ಚ್,19,2021(..):ದುಷ್ಕರ್ಮಿಗಳು ಚಿನ್ನದ ವ್ಯಾಪಾರಿ ಕಾರು ತಡೆದು ಹಲ್ಲೆ ನಡೆಸಿ ಒಂದು ಕೋಟಿ ರೂ ಹಣವನ್ನ ದರೋಡೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಯಶೋಧರಪುರ ಬಳಿ ನಿನ್ನೆ ರಾತ್ರಿ 11 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ಬಾನೂರಿನ ಸ್ವಪ್ನ ಜ್ಯೂವೆಲರ್ಸ್ ಮಾಲೀಕ, ಚಿನ್ನದ ವ್ಯಾಪಾರಿ ಸುರಾಜ್ ಹಣ ಕಳೆದುಕೊಂಡವರು. ಇವರು ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದರು. ಈ ಮಧ್ಯೆ ಬಹಿರ್ದೆಸೆಗೆ ರಸ್ತೆ ಬದಿ ಕಾರು ನಿಲ್ಲಿಸಿದ್ದರು. ಈ ವೇಳೆ ದುಷ್ಕರ್ಮಿಗಳು ಸುರಾಜ್ ಮೇಲೆ ಹಲ್ಲೆ ನಡೆಸಿ ಚಿನ್ನ ಮಾರಿ ಕೊಂಡೊಯ್ಯುತ್ತಿದ್ದ ಒಂದು ಕೋಟಿ ರೂ ಹಣವನ್ನ ಕಿತ್ತು ಪರಾರಿಯಾಗಿದ್ದಾರೆ. ಈ ಕುರಿತು ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – -