ನೆಮ್ಮದಿ ಹರಸಿ ಮಂತ್ರಾಲಯಕ್ಕೆ ಬಂದ ಡಿ ಬಾಸ್ ! ಬೆಂಗಳೂರು, ಮಾರ್ಚ್ 18, 2021 (..):ಬಹಳ ದಿನಗಳ ಬಳಿಕ ನಟ ದರ್ಶನ್ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ಮಠದಲ್ಲಿ ದರ್ಶನ್ ಗೆ ಮಂತ್ರಾಲಯ ಶ್ರೀಗಳು ಸನ್ಮಾನಿಸಿದರು. ಅಲ್ಲಿ ನೆರೆದಿದ್ದ ಅಭಿಮಾನಿಗಳು ಡಿ ಬಾಸ್ ಜೊತೆಗೆ ಸೆಲ್ಫೀ ತೆಗೆಸಿಕೊಂಡರು. ರಾಬರ್ಟ್ ಸಿನಿಮಾ ಯಶಸ್ವಿಯಾದ ಬೆನ್ನಲ್ಲೇ ದಚ್ಚು ರಾಯರ ದರ್ಶನ ಪಡೆದರು. ಜತೆಗೆ ಮನಸ್ಸಿಗೆ ನೆಮ್ಮದಿ ಬೇಕಾಗಿತ್ತು. ಹೀಗಾಗಿ ರಾಯರ ದರ್ಶನಕ್ಕೆ ಬಂದಿದ್ದೇನೆ ಎಂದು ಹೇಳಿದರು. ಈ ವೇಳೆ ಸಿನಿಮಾ ಮತ್ತಿತರ ವಿಷಯಗಳ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.