ಅಪ್ಪುಗೆ ದಿನಕರ್ ಡೈರೆಕ್ಷನ್! ಅಧಿಕೃತ ಪೋಸ್ಟರ್ ಹೊರಬಿತ್ತು ಬೆಂಗಳೂರು, ಮಾರ್ಚ್ 17, 2021 (..): ದಿನಕರ್​ ತೂಗುದೀಪ ನಿರ್ದೇಶನದಲ್ಲಿ ಪುನೀತ್​ ರಾಜ್​ಕುಮಾರ್​ ನಟಿಸಲಿದ್ದಾರೆ ಎಂಬ ಸುದ್ದಿ ಈಗ ಅಧಿಕೃತವಾಗಿದೆ. ಅಪ್ಪು ಬರ್ತ್ ಡೇ ಅಂಗವಾಗಿ ಚಿತ್ರತಂಡವೇ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ಪುನೀತ್​ ಹಾಗೂ ದಿನಕರ್ ತೂಗುದೀಪ ಕಾಂಬಿನೇಶನ್​ನಲ್ಲಿ ಮೂಡಿಬರಲಿರುವ ಸಿನಿಮಾಗೆ ಸದ್ಯಕ್ಕೆ ಪ್ರೊಡಕ್ಷನ್​ ನಂ 24 ಎಂದು ಹೆಸರಿಡಲಾಗಿದೆ. ಜಯಣ್ಣಫಿಲಂಸ್​ ಬ್ಯಾನರ್​ ಅಡಿ ಪುನೀತ್​ ಅವರೊಂದಿಗೆ ಮಾಡುತ್ತಿರುವ 3ನೇ ಸಿನಿಮಾ ಇದಾಗಿದೆ. ಅಂದಹಾಗೆ ಪುನೀತ್​ ಹಾಗೂ ಸಂತೋಷ್​ ಆನಂದ್​ ರಾಮ್​ ನಿರ್ದೇಶನ ಯುವರತ್ನ ಸಿನಿಮಾ ಏ.1ರಂದು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್​ ಆಗಲಿದೆ.