ಪವರ್ ಸ್ಟಾರ್’ಗೆ ಇಂದು ಜನ್ಮದಿನದ ಸಂಭ್ರಮ ಬೆಂಗಳೂರು, ಮಾರ್ಚ್ 17, 2021 (..): ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕೊರೊನಾ ಆತಂಕದ ಕಾರಣ ಈ ವರ್ಷವೂ ಅಭಿಮಾನಿಗಳಿಗೆ ಮನೆಯ ಬಳಿ ಬರಬೇಡಿ ಎಂದು ಅಪ್ಪು ಮನವಿ ಮಾಡಿಕೊಂಡಿದ್ದರು. ಹೀಗಾಗಿ ಈ ವರ್ಷ ಹುಟ್ಟುಹಬ್ಬವನ್ನು ಸರಳವಾಗಿ ಕುಟುಂಬದವರ ಜೊತೆ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ದೂರದ ಊರಿನಿಂದಲೇ ಸಾಮಾಜಿಕ ಜಾಲತಾಣದ ಮೂಲಕವೇ ಶುಭಾಶಯ ಕೋರುತ್ತಿದ್ದಾರೆ. ಬರ್ತ್ ಡೇ ಸ್ಪೆಷಲ್ ಇಂದು ಬಹುನಿರೀಕ್ಷೆಯ ಜೇಮ್ಸ್ ಸಿನಿಮಾದ ಪೋಸ್ಟರ್ ರಿಲೀಸ್ ಆಗುತ್ತಿದೆ.