“ಕೊರೋನಾ ಅಪಾಯ ಕಿಂಚಿತ್ತೂ ನಿರ್ಲಕ್ಷಿಸಬೇಡಿ” : ಸಿಎಂ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ಬೆಂಗಳೂರು,ಮಾರ್ಚ್,16,2021(..): ಕೊರೋನಾ ಅಪಾಯವನ್ನು ಕಿಂಚಿತ್ತೂ ನಿರ್ಲಕ್ಷಿಸಬೇಡಿ. ಈ ಉದಾಸೀನತೆ ನಿಮಗೆ ಮಾತ್ರವಲ್ಲ, ನಿಮ್ಮ ಕುಟುಂಬ ಮತ್ತು ಸಮಗ್ರ ಸಮಾಜಕ್ಕೂ ಅಪಾಯ ತರಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಮುಂಜಾಗ್ರತೆ ವಹಿಸದಿದ್ದರೆ, ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ಕೊರೋನಾ ವಿರುದ್ಧದ ಹೋರಾಟ ಯಶಸ್ವಿಯಾಗುವುದಿಲ್ಲ. ಎಲ್ಲಾ ನಿಯಮಗಳನ್ನು ತಪ್ಪದೆ ಪಾಲಿಸೋಣ, ಕೊರೋನಾ ಮಣಿಸೋಣ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. : --’ - ..-