‘ಡಿಜಿಟಲ್ ಇಂಡಿಯಾ’ವು ಕಾಂಗ್ರೆಸ್ ಯೋಜನೆಯ ಮರುನಾಮಕರಣ” : ಶಾಸಕ ತನ್ವೀರ್ ಸೇಠ್ ಮೈಸೂರು,ಮಾರ್ಚ್,16,2021(..) :ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2006, ಮೇ 18ರಂದು ‘ರಾಷ್ಟ್ರೀಯ ಇ-ಆಡಳಿತ ಯೋಜನೆ()’ಯನ್ನು ಜಾರಿಗೆ ತಂದಿತು. ಪ್ರಸ್ತುತ ಈ ಯೋಜನೆಯನ್ನೇ ‘ಡಿಜಿಟಲ್ ಇಂಡಿಯಾ’ ಎಂದು ಮರು ನಾಮಕರಣ ಮಾಡಿ ಯಥಾವತ್ತಾಗಿ ಜಾರಿಗೊಳಿಸಲಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಟ್ವೀಟ್ ಮಾಡಿದ್ದಾರೆ.ರಾಷ್ಟ್ರೀಯ ಇ-ಆಡಳಿತ ಯೋಜನೆ ಭಾರತ ಸರ್ಕಾರದ ಎಲ್ಲಾ ಸೇವೆಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಭಾರತದ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ‘ರಾಷ್ಟ್ರೀಯ ಇ-ಆಡಳಿತ ಯೋಜನೆ()’ಯನ್ನು ಜಾರಿಗೆ ತಂದಿತ್ತು ಎಂದು ತಿಳಿಸಿದ್ದಾರೆ. : ‘ ’- ---