ನಾಟಕ‌ ಮಾಡೋದು ಬಿಡಿ : ತಾಕತ್ತಿದ್ದರೆ ದಾಖಲೆ ಬಿಡುಗಡೆ ಮಾಡಿ-ಯತ್ನಾಳ್ ವಿರುದ್ದ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ… ಬೆಂಗಳೂರು,ಮಾರ್ಚ್,,16,2021(..):ಸಿಎಂ ಬಿಎಸ್‌ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪದ ಮೇಲೆ ಪದೇ ಪದೇ ಕಿಡಿಕಾರುತ್ತಿರುವ ಸ್ವಪಕ್ಷ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಯತ್ನಾಳ್‌ ಅವರೇ ಯಡಿಯೂರಪ್ಪ ಕುಟುಂಬದವರನ್ನು ಟಾರ್ಗೆಟ್ ಮಾಡಿಕೊಂಡು ಮಾತನಾಡ್ತಿದ್ದೀರಿ. ನಿಮ್ಮ ಬಳಿ ದಾಖಲೆ ಏನಿದೆ? ನಾಟಕ‌ ಮಾಡೋದು ಬಿಡಿ, ನಿಮಗೆ ತಾಕತ್ತಿದ್ದರೆ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು. ಹಾಗೆಯೇ ಇನ್ಮುಂದೆ ಸಿಎಂ ಬಿಎಸ್ ವೈ ಬಗ್ಗೆ ಆರೋಪಿಸಿದರೇ ಸಹಿಸುವುದಿಲ್ಲ. ಶಾಸಕಾಂಗ ಸಭೆ ಕರೆದು ಯತ್ನಾಳ್‌ ರನ್ನ ಉಚ್ಚಾಟನೆ ಮಾಡುವಂತೆ ನಾನು ಆಗ್ರಹಿಸುತ್ತೇನೆ. ಮಾತೆತ್ತಿದರೆ ವಾಜಪೇಯಿ ಹೆಸರೇಳಿ ಕಪಟ ನಾಟಕ ಮಾಡ್ತಿದ್ದೀರಾ. ಸಿಎಂ ಬಿಎಸ್ ವೈ ಬಗ್ಗೆ ಹಾದಿ ಬೀದಿಲಿ ಮಾತನಾಡಿದರೆ ಇನ್ನು ಮುಂದೆ ಸಹಿಸುವುದಿಲ್ಲ. ಯಡಿಯೂರಪ್ಪ ಬಗ್ಗೆ ಟೀಕೆ ಮಾಡಿದ್ರೂ ಒಂದೇ, ಪಕ್ಷದ ಉಪಾಧ್ಯಕ್ಷ ಬಿವೈ ವಿಜಯೇಂದ್ರಗೆ ಟೀಕೆ ಮಾಡಿದ್ರೂ ಒಂದೇ. ಪಕ್ಷದ ಚೌಕಟ್ಟಲ್ಲಿ ಇರುವುದನ್ನು ಯತ್ನಾಳ್ ಕಲಿಯಬೇಕು ಎಂದು ಎಂಪಿ ರೇಣುಕಾಚಾರ್ಯ ಗುಡುಗಿದರು. ಹೊನ್ನಾಳಿಯಲ್ಲಿ ಜನ ನನಗೆ ಓಟು ಕೊಟ್ಟಿದ್ದಾರೆ. ಹಾಕಿದಾರೆ. ನಾನೂ ವಿಜಯಪುರಕ್ಕೆ ಬಂದು ಪ್ರಚಾರ ಮಾಡುತ್ತೇನೆ. ನೀವು ಹೊನ್ನಾಳಿಗೆ ಬಂದು ಪ್ರಚಾರ ಮಾಡಿ ನೋಡೋಣಾ ಎಂದು ಸವಾಲು ಹಾಕಿದರು. : - - -