ವಿಜಯ್ ಹಜಾರೆ ಟ್ರೋಫಿ ಗೆದ್ದು ಕರ್ನಾಟಕದ ದಾಖಲೆ ಸರಿಗಟ್ಟಿದ ಮುಂಬೈ ಬೆಂಗಳೂರು, ಮಾರ್ಚ್ 15, 2021 (..): ಉತ್ತರ ಪ್ರದೇಶವನ್ನು 6 ವಿಕೆಟ್​ಗಳಿಂದ ಬಗ್ಗುಬಡಿದ ಮುಂಬೈ 2021ರ ವಿಜಯ್ ಹಜಾರೆ ಟ್ರೋಫಿಯನ್ನು ಎತ್ತಿಹಿಡಿದಿದೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ, 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 312 ರನ್ ​ಗಳಿಸಿತ್ತು. ಈ ಮೂಲಕ ಮುಂಬೈ ತಂಡ 4ನೇ ಬಾರಿ ವಿಜಯ್ ಹಜಾರೆ ಟ್ರೋಫಿಯನ್ನು ಗೆಲ್ಲುವ ಮೂಲಕ ಅತಿ ಹೆಚ್ಚು ಬಾರಿ ಈ ಟೂರ್ನಿಯನ್ನು ಗೆದ್ದ 2ನೇ ತಂಡ ಎಂಬ ದಾಖಲೆಯನ್ನು ಕರ್ನಾಟಕದ ಜೊತೆ ಹಂಚಿಕೊಂಡಿದೆ. ತಮಿಳುನಾಡು ತಂಡ 5 ಬಾರಿ ಗೆಲ್ಲುವ ಮೂಲಕ ಅಗ್ರಸ್ಥಾನದಲ್ಲಿದೆ.