ಬಿಜೆಪಿ ಸರ್ಕಾರ ಬಡವರಿಂದ ಭೂಮಿ ವಾಪಸ್ಸು ಕಿತ್ತುಕೊಳ್ಳುತ್ತಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಬೆಂಗಳೂರು,ಮಾರ್ಚ್,14,2021(..) :ಕಾಂಗ್ರೆಸ್ ಸರ್ಕಾರ ಇದ್ದಾಗ ಬಡವರಿಗೆ ಭೂಮಿ ನೀಡಿದ್ದೆವು. ಬಿಜೆಪಿ ಸರ್ಕಾರ ಬಂದು ಅದನ್ನು ವಾಪಸ್ಸು ಕಿತ್ತುಕೊಳ್ಳುತ್ತಿದೆ. ಈಗ ರೈತರಿಗೆ ನೀಡಿರುವ ಭೂಮಿಯನ್ನು ಮಾರಾಟ ಮಾಡಬಾರದು. ಈ ವಿಚಾರವಾಗಿ ನಾವು ಮುಂದೆ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದರು.ಸರ್ಕಾರ ನೀಡಿದ ಭೂಮಿಯನ್ನು ರೈತರಿಂದ ಸರ್ಕಾರ ವಾಪಸ್ಸು ಪಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಲಕ್ಷಾಂತರ ಜನರನ್ನು ಬೀದಿಗೆ ಬೀಳಲು ಬಿಡುವುದಿಲ್ಲ. ರಾಜ್ಯಾದ್ಯತ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ಬಗ್ಗೆ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ತಿಳಿಸಿದ್ದಾರೆ. : ---- - --