ಗುಡಿಸಲಿಗೆ ಆಕಸ್ಮಿಕ ಬೆಂಕಿ : ಸುಮಾರು 60ಕ್ಕೂ ಹೆಚ್ಚು ಕುರಿ, 20ಮೇಕೆ ಸಾವು ಬೆಂಗಳೂರು,ಮಾರ್ಚ್,14,2021(..) :ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ಪುಲಮಾಕಲಹಳ್ಳಿಯಲ್ಲಿ ಶನಿವಾರ ರಾತ್ರಿ ಗುಡಿಸಲಿಗೆ ಬಿದ್ದ ಆಕಸ್ಮಿಕ ಬೆಂಕಿಯಲ್ಲಿ ಸುಮಾರು 60ಕ್ಕೂ ಹೆಚ್ಚು ಕುರಿ, 20 ಮೇಕೆ ಮತ್ತು ನಾಲ್ಕು ಜಾನುವಾರು ಸುಟ್ಟು ಕರಕಲಾಗಿವೆ. ಗಂಗಾಧರಪ್ಪ ಎಂಬ ರೈತನ ಹುಲ್ಲಿನ ಗುಡಿಸಲಿಗ ಬೆಂಕಿ ತಗುಲಿ, ಗುಡಿಸಲಿನ ಒಳಗಿದ್ದ 60 ಕ್ಕೂ ಹೆಚ್ಚು ಕುರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.ಪಕ್ಕದ ಗುಡಿಸಲಿನಲ್ಲಿದ್ದ ಅಶ್ವತ್ಥಪ್ಪ ಅವರಿಗೆ ಸೇರಿದ 20 ಮೇಕೆ ಕೂಡ ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ. : --- 60- -20 -