ಬ್ರಹ್ಮಕುಮಾರಿ ಮುಖ್ಯ ಆಡಳಿತಾಧಿಕಾರಿಣಿ ದಾದಿ ಹೃದಯಮೋಹಿನಿ ನಿಧನ : ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ ಬೆಂಗಳೂರು,ಮಾರ್ಚ್,13,2021(..): ಬ್ರಹ್ಮಕುಮಾರಿ ಮುಖ್ಯ ಆಡಳಿತಾಧಿಕಾರಿಣಿಯಾಗಿದ್ದ ದಾದಿ ಹೃದಯಮೋಹಿನಿಯವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ದೇಶದ ವಿವಿಧೆಡೆ ಆಂತರಿಕ ಶಾಂತಿ ನೀಡುವ ಅನೇಕ ರಾಜಯೋಗದ ಕೇಂದ್ರಗಳನ್ನು ತೆರೆದಿದ್ದ ದಾದೀಜಿರವರು, ದೇಶ-ವಿದೇಶಗಳಲ್ಲಿ ಅಸಂಖ್ಯಾತ ಪ್ರವಚನಗಳನ್ನು ನೀಡಿ, ಆಧ್ಯಾತ್ಮಿಕ ಜ್ಞಾನಪ್ರಸಾರ ನಡೆಸಿದ್ದರು. ದಾದೀಜಿ ಅವರ ಜೀವನ ಸರಳ, ಶಾಂತಿಯುತ ಮತ್ತು ಆಧ್ಯಾತ್ಮಿಕ ಜೀವನವನ್ನು ಪಾಲಿಸಲು ಅಸಂಖ್ಯಾತ ಜನರಿಗೆ ಪ್ರೇರಣೆ ನೀಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅನುಯಾಯಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ. : - ----- ..-