“ಯುವ ಸಾಹಿತಿ ಸ್ವಾಮಿ ಪೊನ್ನಾಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ” ಚಾಮರಾಜನಗರ,ಮಾರ್ಚ್,13,2021(..) :ಚಾಮರಾಜನಗರ ಜಿಲ್ಲೆಯ ಯುವ ಕವಿ, ಸಾಹಿತಿ ಸ್ವಾಮಿ ಪೊನ್ನಾಚಿ ಅವರಿಗೆ 2020ನೆ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಲಭಿಸಿದೆ.ಸ್ವಾಮಿ ಪೊನ್ನಾಚಿಯ ಅವರ ಕಥಾಸಂಕಲನ “ಧೂಪದ ಮಕ್ಕಳು” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ದೊರತಿದೆ. ಮಲೈಮಹದೇಶ್ವರ ಬೆಟ್ಟಗಳ ತುದಿಯಲ್ಲಿ, ರಸ್ತೆಯೇ ಮುಗಿದು ಹೋಗುವ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಈ ಹುಡುಗನಿಗೆ ಈ ಪ್ರಶಸ್ತಿ ದಕ್ಕಿರುವುದು ಬಹಳ ಸಂಭ್ರಮದ ವಿಷಯವಾಗಿದೆ. : -- -