ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣ: ಕಾನೂನು ಚೌಕಟ್ಟಿನಲ್ಲಿ ಎಸ್ ಐಟಿ ತನಿಖೆ- ಪೊಲೀಸ್ ಆಯುಕ್ತ ಕಮಲ್ ಪಂತ್…. ಬೆಂಗಳೂರು,ಮಾರ್ಚ್,12,2021(..):ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರನ್ನೊಳಗೊಂಡ ತಂಡ ರಚನೆ ಮಾಡಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು. ಈ ಕುರಿತು ಇಂದು ಮಾತನಾಡಿದ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತವದಲ್ಲಿ 7 ಜನರ ತಂಡವನ್ನ ರಚಿಸಿದ್ದೇವೆ. ಡಿಸಿಪಿ ಅನುಚೇತ್ , ಡಿಸಿಪಿ ರವಿಕುಮಾರ್, ಎಸಿಪಿ ಧರ್ಮೇಂದ್ರ, ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು, ಇನ್ಸ್ ಪೆಕ್ಟರ್ ಮಾರುತಿ ಸೇರಿ 7 ಜನರ ತಂಡ ರಚಿಸಲಾಗಿದೆ ಎಂದರು. ಕಾನೂನು ಚೌಕಟ್ಟಿನಲ್ಲಿ ಎಸ್ ಐಟಿ ತನಿಖೆ ನಡೆಯುತ್ತದೆ. ಯಾವ ರೀತಿ ತನಿಖೆ ಎಂದು ಸದ್ಯಕ್ಕೆ ಚರ್ಚೆ ಮಾಡಿಲ್ಲ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು. : –- - - - - - -