ಶಿವಣ್ಣನ ಖಡಕ್ ಲುಕ್! ಹ್ಯಾಟ್ರಿಕ್ ಹೀರೋ 125ನೇ ಚಿತ್ರ ಅನೌನ್ಸ್ ಬೆಂಗಳೂರು, ಮಾರ್ಚ್ 12, 2021 (..): ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್‌ ಅವರ 125ನೇ ಸಿನಿಮಾ ಘೋಷಣೆಯಾಗಿದೆ! ಹೌದು. ಶಿವಣ್ಣನ 125 ನೇ ಸಿನಿಮಾಗೆ ‘ವೇದ’ ಎಂದು ಟೈಟಲ್ ಇಡಲಾಗಿದೆ. ನಿನ್ನೆ ಶಿವರಾತ್ರಿ ಪ್ರಯುಕ್ತ ಪೋಸ್ಟರ್ ಬಿಡುಗಡೆಯಾಗಿದೆ. ಸಿನಿಮಾ ಮೂಲಕ ಮತ್ತೆ ಎ ಹರ್ಷ-ಶಿವಣ್ಣ ಜೊತೆಯಾಗುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಗೀತಾ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಿಸುತ್ತಿದ್ದಾರೆ. ಈ ಸಿನಿಮಾ 1960 ರ ಕಾಲದ ಕತೆಯನ್ನು ಒಳಗೊಂಡಿದೆಯಂತೆ. ಅರ್ಜುನ್ ಜನ್ಯಾ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.