ಸಿಡಿ ಮಾಡಿದ್ದೇ ಕಾಂಗ್ರೆಸ್ ನವರು- ಹೊಸ ಬಾಂಬ್ ಸಿಡಿಸಿದ ಸಚಿವ ಎಸ್.ಟಿ ಸೋಮಶೇಖರ್… ಬೆಂಗಳೂರು,ಮಾರ್ಚ್,10,2021(..):ರಮೇಶ್ ಜಾರಕಿಹೊಳಿ ಸಿಡಿ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ, ಸಿಡಿಯನ್ನು ಮಾಡಿದ್ದು ಕಾಂಗ್ರೆಸ್ ನವರೇ,ಇನ್ಯಾರು ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ ಸಿಡಿ ಯನ್ನು ಮಾಡಿದ್ದು ಕಾಂಗ್ರೆಸ್ ನವರೇ, ಮತ್ಯಾರು ಮಾಡ್ತಾರೆ, ಇಂತಹ ಮನೆಹಾಳ್ ಕೆಲಸ ಮಾಡೋದು ಕಾಂಗ್ರೆಸ್ ನವರೇ. ನಾನು 20 ವರ್ಷ ಕಾಂಗ್ರೆಸ್ ನಲ್ಲಿ ಇದ್ದೆ. ಅವರು ಏನು ಮಾಡುತ್ತಾರೆಂದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಒತ್ತಾಯಿಸಿದ್ದೇನೆ. ಸಿಬಿಐ ತನಿಖೆಯಿಂದ ಎಲ್ಲವೂ ಆಚೆಗೆ ಬರುತ್ತದೆ. ರಾಜಕೀಯವಾಗಿ ಸವಾಲು ಹಾಕಲಿ, ತಾಕತ್ತಿದ್ದರೆ ನನ್ನ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ ಎಂದು ಎಸ್.ಟಿ ಸೋಮಶೇಖರ್ ಸವಾಲು ಹಾಕಿದರು. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಿಂದ ಅವರ ಮಾನ-ಮರ್ಯಾದೆ ಏನಾಯಿತು. ರಾಜಕೀಯ ಷಡ್ಯಂತ್ರದಿಂದ ಮಾನ ಹಾನಿಯಾಗಬಾರದು. ಹೀಗಾಗಿ ನಾವು ಆರು ಜನ ಸಚಿವರು ಕೋರ್ಟ್ ಗೆ ಮೊರೆ ಹೋಗಿದ್ದೇವೆ ಎಂದು ಕೋರ್ಟ್ ಗೆ ಹೋಗಿದ್ದಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದರು. …. – .. , . 10, 2021 (..): , .. . , “ , ? . 20 , ,” .“ , . , ,” .“ . ’ . , ,” .: .. / / / : - –-- ­ –