ಪೊಲೀಸ್ ಸೇವೆಯ ಆಕಾಂಕ್ಷಿಗಳಿಗಾಗಿ ʼಟಾರ್ಗೆಟ್‌ ಪಿಎಸ್‌ಐʼ ವಿಶೇಷ ಕೋರ್ಸ್: ಡಿಸಿಎಂ ಅಶ್ವಥ್ ನಾರಾಯಣ್ ಚಾಲನೆ… ಬೆಂಗಳೂರು,ಮಾರ್ಚ್,10,2021(..):ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಗಳು ಹಾಗೂ ಕಾನ್‌ ಸ್ಟೆಬಲ್‌ಗಳ ಪರೀಕ್ಷೆಗಾಗಿ ಅನಾಕಾಡೆಮಿ ಆರಂಭಿಸಿರುವ ವಿಶೇಷ ಕೋರ್ಸ್ʼಗಳಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ನಗರದಲ್ಲಿ ಚಾಲನೆ ನೀಡಿದರು. ಟಾರ್ಗೆಟ್‌ ಪಿಎಸ್‌ಐʼ ಹೆಸರಿನ ಈ ಕೋರ್ಸ್‌ಗಳನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಕಾನ್‌ಸ್ಟೆಬಲ್‌ ಹುದ್ದೆಗಳಿಗಾಗಿ ವಿಶೇಷವಾಗಿ ರೂಪಿಸಲಾಗಿದ್ದು, ಇದು ಪ್ರತ್ಯೇಕ ಅಧ್ಯಯನ ಮಾದರಿಯನ್ನು ಹೊಂದಿದೆ. ಅನಾಕಾಡೆಮಿಯ ಕೋರ್ಸುಗಳನ್ನು ಆರಂಭಿಸಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, “ಪೊಲೀಸ್‌ ಇಲಾಖೆ ಸೇರಬೇಕೆಂದು ಬಯಸುವ ಯುವ ಜನರಿಗೆ ಈ ಕೋರ್ಸುಗಳು ಹೆಚ್ಚು ಉಪಯುಕ್ತ. ಅಕಾಡೆಮಿಗೆ ಸೇರಿ ಸೂಕ್ತ ಮಾರ್ಗದರ್ಶನ” ಪಡೆಯಬಹುದು ಎಂದರು. ಯಾವುದೇ ಪರೀಕ್ಷೆಯನ್ನು ಎದುರಿಸಬೇಕಾದರೆ, ಅದಕ್ಕೆ ಉತ್ತಮ ಪೂರ್ವ ಸಿದ್ಧತೆಯೂ ಅಗತ್ಯ. ನಿರಂತರ ಅಧ್ಯಯನವೂ ಮುಖ್ಯ ಎಂದು ಅವರು ಹೇಳಿದರು. ಕರ್ನಾಟಕ ಪೊಲೀಸ್ ಸೇವೆಯ ಆಕಾಂಕ್ಷಿಗಳಿಗಾಗಿ 2021 ಮಾರ್ಚ್ 9 ರಿಂದ ಬ್ಯಾಚ್‌ಗಳು ಪ್ರಾರಂಭವಾಗಿವೆ. ಪ್ರಚಲಿತ ವಿದ್ಯಮಾನಗಳು, ರಾಜಕೀಯ, ವಿಜ್ಞಾನ- ತಂತ್ರಜ್ಞಾನ, ಇತಿಹಾಸ, ಅನುವಾದ, ಅರ್ಥಶಾಸ್ತ್ರ, ಮತ್ತು ಪಿಎಸ್ಐ ಹಾಗೂ ಪಿಸಿ ಪರೀಕ್ಷೆಗಳಿಗೆ ಸಂಬಂಧಿಸಿದ ಮಾನಸಿಕ ಸಾಮರ್ಥ್ಯದಂತಹ ಎಲ್ಲಾ ಪ್ರಮುಖ ವಿಷಯಗಳನ್ನು ಒಳಗೊಂಡ ಕೋರ್ಸುಗಳು ಇಲ್ಲಿವೆ. …. ‘ ’ : ,. 10, 2021 (..): . .. . ‘ ’ . . , . 9, 2021. , , -, , , .: / / / / . .. : - –- - -- .