ಇದು ಅಭಿವೃದ್ಧಿಗೆ ಪೂರಕವಲ್ಲದ ಟೊಳ್ಳು ಬಜೆಟ್- ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ…. ಬೆಂಗಳೂರು ಮಾರ್ಚ್,8,2021(..)ಕೊರೋನಾ ಸಂಕಷ್ಟದ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದು ಈ ಬಜೆಟ್ ಅನ್ನ ಆಡಳಿತ ಪಕ್ಷದ ನಾಯಕರು ಸ್ವಾಗತಿಸಿದರೇ ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ಕುರಿತು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಅನೈತಿಕ ಸರ್ಕಾರ ಮಂಡಿಸಿದ್ದ ಬಜೆಟ್ ಕೇಳಬಾರದೆಂದು ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿದವು. ಆ ಮೇಲೆ ಬಜೆಟ್ ಪ್ರತಿ ನೋಡಿದೆ. ಇದು ಅಭಿವೃದ್ಧಿಗೆ ಪೂರಕವಲ್ಲದ ಟೊಳ್ಳು ಬಜೆಟ್. ಈ ಬಜೆಟ್ ಗೆ ಯಾವುದೇ ಗೊತ್ತು ಗುರಿ ಇಲ್ಲ ಎಂದು ಲೇವಡಿ ಮಾಡಿದರು. ಹಾಗೆಯೇ ನಾವು ಮಂಡಿಸುಯತ್ತಿದ್ದ ಬಜೆಟ್ ಪಾರದರ್ಶಕವಾಗಿದ್ದವು. ಈ ಬಜೆಟ್ ನಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ರಾಜ್ಯದ ಹಣಕಾಸು ಸ್ಥಿತಿಯನ್ನ ಸರ್ಕಾರ ಬಚ್ಚಿಡುತ್ತಿದೆ ಎಂದು ಕಿಡಿಕಾರಿದರು. : - – -.- -