ಇದು ನೂರಕ್ಕೆ ನೂರರಷ್ಟು ನಕಲಿ ಸಿಡಿ: ನಾನು ನಿರಪರಾಧಿ- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ… ಬೆಂಗಳೂರು,ಮಾರ್ಚ್,9,2021(..):ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣ ಸಂಬಂಧ, ಇದು ನೂರಕ್ಕೆ ನೂರರಷ್ಟು ನಕಲಿ ಸಿಡಿ. ನಾನು ಅಪರಾಧಿಯಲ್ಲ. ನಿರಪರಾಧಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಲೀಲೆ ವಿಡಿಯೋ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಈ ಸಿಡಿ 4 ತಿಂಗಳ ಮೊದಲೇ ಮಾಡಿರುವುದು. ಇದು 100 ಪರ್ಸೆಂಟ್ ನಕಲಿ ಸಿಡಿ. ನಾನು ಬಹಳ ದುಃಖದಲ್ಲಿದ್ದೇನೆ. ನಾಲ್ಕೈದು ದಿನಗಳಿಂದ ಎಲ್ಲಾ ಬೆಳವಣಿಗೆ ನೋಡಿದ್ದೇನೆ . ರಾಜೀನಾಮೆ ನೀಡಿದ್ದು ನನ್ನ ವೈಯಕ್ತಿಕ ನಿರ್ಧಾರ. ರಾಜೀನಾಮೆ ನೀಡಿದ ನಂತರ ಊರಿಗೆ ಹೋದೆ. ಅಮೇಲೆ ಏನು ಬೆಳವಣಿಗೆಯಾಗಿದೆ ಎಂದು ಗೊತ್ತಿಲ್ಲ ಎಂದರು. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ಬೆಂಗಳೂರಿನಲ್ಲಿ 2ಕಡೆ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಯಶವಂತಪುರ, ಹುಳಿಮಾವು ಬಳಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಕುಟುಂಬದ ಮರ್ಯಾದೆ ಮುಖ್ಯ. ರಾಜಕಾರಣವಲ್ಲ. ನನಗೆ ಮಾನಸಿಕವಾಗಿ ಧೈರ್ಯ ತುಂಬಿದ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಧನ್ಯವಾದ ಹೇಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು. … “ 100% : – , . 09, 2021 (..): . “ .” . . “ , . . ’ ,” .“ , , . , , . .. .. ” . .5 . “ . ? . . ’ .”: / / : ---- -