“ಕೋರ್ಟ್ ಸರಿ, ತಪ್ಪು ಹೇಳುವ ಹೊತ್ತಿಗೆ, ತೇಜೋವಧೆ ಆಗಿ ಹೋಗುತ್ತೆ” : ಸಚಿವ ಜೆ.ಸಿ. ಮಾಧುಸ್ವಾಮಿ ಬೆಂಗಳೂರು,ಮಾರ್ಚ್,07,2021(..) :ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿ, ತಪ್ಪು ಬಗ್ಗೆ ಕೋರ್ಟ್ ಹೇಳುತ್ತೆ. ಆದರೆ, ಅಷ್ಟರೊಳಗೆ ಅವರ ತೇಜೋವಧೆ ಆಗಿ ಹೋಗುತ್ತೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಸಂತ್ರಸ್ತೆ ಬಂದು ದೂರು ನೀಡಿಲ್ಲ. ಸರಿ ತಪ್ಪು ಕೋರ್ಟ್ ಹೇಳುತ್ತೆ. ಆದರೆ, ಅಷ್ಟರಲ್ಲಿ ಅವರ ತೇಜೋವಧೆ ಆಗಿ ಹೋಗಿರುತ್ತದೆ. ಈ ಕಾರಣಕ್ಕಾಗಿಯೇ ಕೆಲ ಸಚಿವರು ಕೋರ್ಟ್ ಮೊರೆ ಹೋಗಿ ಮಾಧ್ಯಮಗಳಲ್ಲಿ ಪ್ರಸಾರ ಆಗದಂತೆ ತಡೆ ತರುತ್ತಿದ್ದಾರೆ. ತೇಜೋವಧೆ ತಡೆಯಲು ಇಂತಹ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು. : -, ---- -- ..