ಜಯದೇವ ಆಸ್ಪತ್ರೆ ವಿವಿಧ ಕಾಮಗಾರಿ : ಡಿಸಿಎಂ ಗೋವಿಂದ ಕಾರಜೋಳ ಪರಿಶೀಲನೆ ಬೆಂಗಳೂರು,ಮಾರ್ಚ್,06,2021(..) :ನಗರದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ, ವಿವಿಧ ಕಟ್ಟಡ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಂತರ ಮಾತನಾಡಿ, ಜಯದೇವ ಆಸ್ಪತ್ರೆಯು ಅತ್ಯುತ್ತಮವಾಗಿದ್ದು, ವಿಖ್ಯಾತಿಯಾಗಿದೆ. ನುರಿತ ತಜ್ಞ ವೈದ್ಯರ ತಂಡ, ತಂತ್ರಜ್ಞರ ತಂಡ, ಅರೆ ವೈದ್ಯಕೀಯ ಸಿಬ್ಬಂದಿಯು ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದು ಮೆಚ್ಚುಗೆವ್ಯಕ್ತಪಡಿಸಿದರು. ಪೂರಕವಾಗಿ ಮತ್ತಷ್ಟು ಸೌಲಭ್ಯವನ್ನು ಒದಗಿಸಲು ವಿವಿಧ ಕಟ್ಟಡ ಕಾಮಗಾರಿಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಕಾಮಗಾರಿಗಳು ಅತ್ಯತ್ತಮ ಗುಣಮಟ್ಟದಿಂದ ಕೂಡಿವೆ. ಶೀಘ್ರವಾಗಿ ಪೂರ್ಣಗೊಳ್ಳಲಿವೆ. ಇದರಿಂದ ಮತ್ತಷ್ಟು ಉತ್ತಮವಾದ ಸೇವೆ ದೊರಕಲು ನೆರವಾಗುತ್ತದೆ ಎಂದು ಹೇಳಿದರು. ಈ ಸಂದರ್ಭ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು. : ----- -