ದಿನೇಶ್ ಕಲ್ಲಹಳ್ಳಿ ಬಂಧನಕ್ಕೆ ಶಾಸಕ ಎಂಪಿ ರೇಣುಕಾಚಾರ್ಯ ಆಗ್ರಹ…. ಬೆಂಗಳೂರು,ಮಾರ್ಚ್,5,2021(..): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿದ ದಿನೇಶ್ ಕಲ್ಲಹಳ್ಳಿ ಅವರನ್ನ ಬಂಧಿಸಿ ತನಿಖೆಗೊಳಪಡಿಸುವಂತೆ ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ಆ ಇಬ್ಬರ ಒಪ್ಪಿಗೆಯಿಂದ ಆ ವಿಡಿಯೋ ಆಗಿರಬಹುದು. ದಿನೇಶ್ ಕಲ್ಲಳ್ಳಿ ಕೂಡಲೇ ಬಂಧಿಸಬೇಕು. ಬಂಧಿಸಿ ನಾಲ್ಕು ಬಾರಿಸಿದ್ರೆ ಸತ್ಯ ಹೊರಬರುತ್ತದೆ. ಹೀಗಾಗಿ ದಿನೇಶ್ ಕಲ್ಲಳ್ಳಿ ಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. : - –- –