“ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಮಹಿಳಾ ಪ್ರವಾಸಿಗರಿಗೆ ಪ್ಯಾಕೇಜ್ ಟೂರ್” ಬೆಂಗಳೂರು,ಮಾರ್ಚ್,06,2021(..) :ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಪ್ರವಾಸಿಗರನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಮಹಿಳಾ ಪ್ರವಾಸಿಗರಿಗೆ ಪ್ಯಾಕೇಜ್ ಟೂರ್ ಹಾಗೂ ಮಾರ್ಚ್ ಮಾಹೆಯಲ್ಲಿ ತೆರಳುವ ಮಹಿಳಾ ಪ್ರವಾಸಿಗರಿಗೆ ಶೇ. 10% ರಿಯಾಯಿತಿ ನೀಡುವುದಾಗಿ ನಿಗಮದ ಅಧ್ಯಕ್ಷೆ ಶ್ರುತಿ ಕೃಷ್ಣ ತಿಳಿಸಿದ್ದಾರೆ. ಮಾರ್ಚ್ 08ರಂದು ಆಯೋಜನೆಯಾಗುವ ಪ್ರವಾಸಿ ಪ್ಯಾಕೇಜ್ ಗಳಲ್ಲಿ ತೆರಳಲಿರುವ ಮಹಿಳಾ ಪ್ರವಾಸಿಗರಿಗೆ ಪ್ಯಾಕೇಜ್ ಟೂರ್ ಹಾಗೂ ಮಯೂರ ಹೋಟೆಲಿನಲ್ಲಿ ವಾಸ್ತವ್ಯ ಸೌಲಭ್ಯಗಳಿಗೆ ಕೊಠಡಿಗಳ ದರದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗುವುದು ಎಂದಿದ್ದಾರೆ. ಮಹಿಳೆಯರನ್ನು ಪ್ರವಾಸಿ ಚಟುವಟಿಕೆಗಳತ್ತ ಹೆಚ್ಚಾಗಿ ಆಕರ್ಷಿಸಲು ನಿಗಮದ ವತಿಯಿಂದ ಧಾರ್ಮಿಕ, ನೈಸರ್ಗಿಕ, ಪಾರಂಪರಿಕ ಹಾಗೂ ಕಡಲತೀರ ಪ್ರವಾಸಗಳನ್ನು ಆಚರಣೆ ಮಾಡಲಾಗುತ್ತಿದೆ. ಎಲ್ಲಾ ಪ್ರವಾಸಗಳಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 08 ರಂದು ಆಯೋಜಿಸಲಾಗುವ ಪ್ರವಾಸಗಳಿಗೆ ಮುಂಗಡವಾಗಿ ಟಿಕೇಟ್ ಕಾಯ್ದಿರಿಸುವ ಒಬ್ಬ ಮಹಿಳಾ ಪ್ರವಾಸಿಗರಿಗೆ 50% ರಿಯಾಯಿತಿ ಹಾಗೂ ಮಾರ್ಚ್ ಮಾಹೆಯಲ್ಲಿ ತೆರಳುವ ಮಹಿಳಾ ಪ್ರವಾಸಿಗರಿಗೆ ಒಟ್ಟಾರೆ ದರದಲ್ಲಿ 10% ರಿಯಾಯಿತಿ ನೀಡುವ ಮೂಲಕ ವಿಶೇಷ ಕೊಡುಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮಹಿಳಾ ಪ್ರವಾಸಿಗರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು. ನಿಗಮದಿಂದ ಆಯೋಜಿಸಲಾಗುವ ವ್ಯವಸ್ಥಿತ ಪ್ರವಾಸಗಳು ಹಾಗೂ ಮಯೂರ ಹೋಟೆಲ್ ವಿವರಗಳಿಗೆ ನಿಗಮದ ಜಾಲತಾಣ .. ಭೇಟಿ ನೀಡಲು ಹಾಗೂ 080-43344334/8970650070 ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ. …. “ ’ ”, . 06, 2021 (..): ’ 10% . 8 50% . , , . 8 50% 10% . .. 080-43344334/8970650070.: / / / 10% / ’ : -’ -----