ಯಾರೇ ದೂರು ಕೊಟ್ಟರೂ ಯುವತಿ ಬಂದು ಹೇಳಿಕೆ ಕೊಡಬೇಕು- ಸತೀಶ್ ಜಾರಕಿಹೊಳಿ… ಬೆಳಗಾವಿ,ಮಾರ್ಚ್,4,2021(..):ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ದೂರು ಕೊಟ್ಟರೂ ಯುವತಿ ಬಂದು ಹೇಳಿಕೆ ಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಗೋಕಾಕ್ ನಲ್ಲಿ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ವಿಡಿಯೋ ಬಗ್ಗೆ ಪೊಲೀಸರೇ ಸರ್ಟಿಫಿಕೆಟ್ ಕೊಡಬೇಕು. ಯುವತಿಗೆ ಪೊಲೀಸರು ನೋಟಿಸ್ ಕೊಟ್ಟು ಕರೆಸಬೇಕು. ಯಾರೇ ದೂರು ಕೊಟ್ರೂ ಯುವತಿ ಬಂದು ಹೇಳಿಕೆ ಕೊಡಬೇಕು ಎಂದರು. ಪ್ರಕರಣ ಸಂಬಂಧ ಆ ಯುವತಿಯ ಹೇಳಿಕೆ ಬಹಳ ಮುಖ್ಯ. ಯುವತಿ ಬಂದು ದೂರು ಕೊಟ್ಟಾಗ ಅದರ ಮಹತ್ವ ಹೆಚ್ಚು. ಬಿಡುಗಡೆ ಮಾಡಿರುವ ವಿಡಿಯೋ ಅಸಲಿಯೋ ನಕಲಿಯೋ ಎಂಬ ಬಗ್ಗೆ ಸತ್ಯಾಸತ್ಯತೆ ಬಯಲಾಗಬೇಕು ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. : - -- -