ಕಲಾಮಂದಿರ ಪಕ್ಕದಲ್ಲಿ ಅಗ್ನಿ ಅವಘಡ: ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡು ಮೈಸೂರು,ಮಾರ್ಚ್,4,2021(..):ನಗರದ ಕಲಾಮಂದಿರ ಪಕ್ಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಕಲಾಮಂದಿರ ಕಿರುರಂಮಂದಿರದ ಪಕ್ಕದ ಜಾಗದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು. ಜಿಲ್ಲಾಧಿಕಾರಿ ನಿವಾಸದ ನಿಯೋಜಿತ ಪೋಲೀಸ್ ಸಿಬ್ಬಂದಿ ಈ ಕುರಿತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬಹುತೇಕ ಬೆಂಕಿ ನಂದಿಸಿದ್ದಾರೆ. ಕಿರುರಂಮಂದಿರ ಬಹುತೇಕ ಮರಗಳಿಂದಲೇ ಆವೃತವಾಗಿರುವ ಪ್ರದೇಶವಾಗಿದೆ. : - - – -