ಒನ್ ನೇಷನ್ ಒನ್ ಎಲೆಕ್ಷನ್ ಚರ್ಚೆಗೆ ವಿರೋಧಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ… ಬೆಂಗಳೂರು,ಮಾರ್ಚ್,4,2021(..):ಒಂದು ದೇಶ, ಒಂದೇ ಚುನಾವಣೆ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ವಿರೋಧದ ನಡುವೆ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪಿಸಿದರು. ವಿಪಕ್ಷಗಳ ವಿರೋಧದ ನಡುವೆ ಚರ್ಚೆ ಆರಂಭವಾಯಿತು. ಚರ್ಚೆಗೆ ವಿರೋಧ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಯಾವ ನಿಯಮಾವಳಿ ಅಡಿ ತಂದಿದ್ದೀರಿ . ಇದು ಆರ್ ಎಸ್ ಎಸ್ ಅಜೆಂಡಾ ಎಂದು ಘೋಷಣೆ ಕೂಗಿದರು. ಕೂಗಿದರು. ಈ ವೇಳೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ನನಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಚರ್ಚೆಗೆ ಅವಕಾಶ ಕೊಟ್ಟಿದ್ದೇನೆ ಎಂದರು. ಬೇರೆ ಸಿದ್ಧಾಂತವನ್ನಿಟ್ಟುಕೊಂಡು ಇಂತಹ ವಿಚಾರ ಚರ್ಚೆ ಬೇಡ ಸ್ಪೀಕರ್ ವಿಶೇಷಾಧಿಕಾರ ದುರುಪಯೋಗ ಸರಿಯಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದರು. ನಿಮ್ಮ ಮಾತು ನಿಮ್ಮ ಘನತೆಗೆ ಸರಿ ಹೋಗಲ್ಲ ಎಂದು ಸ್ಪೀಕರ್ ಕಾಗೇರಿ ರಮೇಶ್ ಕುಮಾರ್ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ನಡುವೆ ಕಾಂಗ್ರೆಸ್ ಸದಸ್ಯರು ಸದನದ ಭಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಗದ್ದಲ ಉಂಟಾದ ಹಿನ್ನೆಲೆ ಕಲಾಪವನ್ನ ಸ್ಪೀಕರ್ ಕಾಗೇರಿ 15 ನಿಮಿಷಗಳ ಕಾಲ ಮುಂದೂಡಿದರು. …. ‘ , ’: . , .04, 2021 (..): ‘ , ’ ., ‘ , ’ , . . . . 15 .: / / / , / : - – - - -