ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಕೇಸ್: ಇಂದು ವಿಚಾರಣೆಗೆ ಹಾಜರಾಗದಿರಲು ದಿನೇಶ್ ಕಲ್ಲಹಳ್ಳಿ ನಿರ್ಧಾರ… ಬೆಂಗಳೂರು,ಮಾರ್ಚ್,4,2021(..): ರಮೇಶ್‌ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಿಡುಗಡೆ ಮಾಡಿ ಸಂತ್ರಸ್ತೆಯ ಪರವಾಗಿ ದೂರು ನೀಡಿದ್ದ ನಾಗರೀಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ ಇಂದು ಪೊಲೀಸ್ ವಿಚಾರಣೆಗೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ದಿನೇಶ್ ಕಲ್ಲಹಳ್ಳಿ ಇಂದು ಪೊಲೀಸ್‌ ವಿಚಾರಣೆಯನ್ನ ಹಾಜರಾಗಬೇಕಿತ್ತು. ಆದರೆ ಸೂಕ್ತ ಭದ್ರತೆ ನೀಡಿಲ್ಲ ಎಂಬ ಕಾರಣ ನೀಡಿ ಇಂದು ವಿಚಾರಣೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ನನಗೆ ಜೀವ ಬೆದರಿಕೆ ಇದೆ. ಆದರೆ ಸೂಕ್ತ ಭದ್ರತೆಯೂ ಸಿಕ್ಕಿಲ್ಲ. ಹಾಗಾಗಿ ನಾನಿಂದು ಪೊಲೀಸ್‌ ವಿಚಾರಣೆಗಾಗಿ ಪೊಲೀಸ್‌ ಠಾಣೆಗೆ ಹೋಗೋದಿಲ್ಲ. ಮಾರ್ಚ್ 9 ರಂದು ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದೇನೆ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದಿನೇಶ್ ಕಲ್ಲಹಳ್ಳಿ ಪತ್ರ ಬರೆದಿದ್ದಾರೆ. …. : , . 04, 2021 (..): , . . . , “ . . , ’ . 9.”: / / / / : - - - - - - -