ಮೀಸಲಾತಿ ಸಂಬಂಧ ಉನ್ನತ ಸಮಿತಿ ರಚನೆ : ಸಂಪುಟ ಸಭೆಯಲ್ಲಿ ತೀರ್ಮಾನ ಬೆಂಗಳೂರು,ಮಾರ್ಚ್,03,2021(..) :ಮೀಸಲಾತಿ ಬಗ್ಗೆ ಉನ್ನತ ಸಮಿತಿ ರಚಿಸಲು ತೀರ್ಮಾನಿಸಿದ್ದು, ಹೈಕೋರ್ಟ್ ನಿವೃತ್ತ ಮೂವರು ನ್ಯಾಯಮೂರ್ತಿಗಳು ಈ ಸಮಿತಿಯಲ್ಲಿ ಇರುವರು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸಂಪುಟ ಸಭೆಯಲ್ಲಿ ಮೀಸಲಾತಿ ಬಗ್ಗೆ ಚರ್ಚಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್.ವೈ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಕುರುಬ, ವಾಲ್ಮೀಕಿ, ಪಂಚಮಸಾಲಿಗಳು ಸೇರಿದಂತೆ ಇತರರು ಮೀಸಲಾತಿಗೆ ಬೇಡಿಕೆಯಿಟ್ಟಿದ್ದು, ಈ ಕುರಿತಂತೆ ಉನ್ನತ ಸಮಿತಿ ರಚಿಸಲು ನಿರ್ಧಾರಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. :-----