ರಾಜ್ಯ ಬಜೆಟ್ ಹಿನ್ನೆಲೆ: ಸಿಎಂಗೆ ಪತ್ರ ಬರೆದು ಹಲವು ಬೇಡಿಕೆಯಿಟ್ಟ ಶಾಸಕ ತನ್ವೀರ್ ಸೇಠ್… ಮೈಸೂರು,ಮಾರ್ಚ್,3,2021(..):ಮಾರ್ಚ್ 8 ರಂದು ರಾಜ್ಯ ಬಜೆಟ್ ಗೆ ಸಿಎಂ ಬಿಎಸ್ ಯಡಿಯೂರಪ್ಪ ಪೂರ್ವ ತಯಾರಿ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಶಾಸಕ ತನ್ವೀರ್ ಸೇಠ್ ಪತ್ರ ಬರೆದು ಮೈಸೂರು ನಗರದ ಅಭಿವೃದ್ಧಿ ಕುರಿತು ಸಲಹೆ ನೀಡಿದ್ದಾರೆ. ಈ ಕುರಿತು ಸಿಎಂ ಬಿಎಸ್ ವೈಗೆ ಪತ್ರ ಬರೆದಿರುವ ಶಾಸಕ ತನ್ವೀರ್ ಸೇಠ್, ಮೈಸೂರು ನಗರದ ಅಭಿವೃದ್ಧಿ ವಿಚಾರ ಕುರಿತು 30ಕ್ಕೂ ಹೆಚ್ಚು ವಿಚಾರಗಳನ್ನು ಪ್ರಸ್ತಾಪಿಸಿ ಮನವಿ ಸಲ್ಲಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ಪ್ರತ್ಯೇಕ ಜಲಮಂಡಳಿ ರಚನೆ, ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ, ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹಿಸಿದ ದಂಡ ಮೊತ್ತದ ಶೇ.50ರಷ್ಟು ಹಣವನ್ನು ಸಂಚಾರ ಅಭಿವೃದ್ಧಿಗೆ ಬಳಕೆ, ಪೊಲೀಸ್ ಅಕಾಡೆಮಿ ಮತ್ತು ತರಬೇತಿ ಸ್ಥಳಾಂತರಕ್ಕೆ ನಗರದ ಹೊರ ವಲಯದಲ್ಲಿ 100 ಎಕರೆ ಜಾಗ ಮೀಸಲು, ನರಸಿಂಹರಾಜ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ರೈಲ್ವೆ ಗೂಡ್ಸ್‌ ಶೆಡ್ ಬಳಿ ಲಾರಿ ಟರ್ಮಿನಲ್ ನಿರ್ಮಾಣ ಸೇರಿದಂತೆ ಹಲವಾರು ಬೇಡಿಕೆಗನ್ನ ಸಿಎಂ ಬಿಎಸ್ ಯಡಿಯೂರಪ್ಪಗೆ ಶಾಸಕ ತನ್ವೀರ್ ಸೇಠ್ ಸಲ್ಲಿಕೆ ಮಾಡಿದ್ದಾರೆ. …. : , . 03, 2021 (..): ’ 8. .. . 30 , , , 50% , 100 , - .. , .: / .. / / 30 : –--- --