ರಶ್ಮಿಕಾ ಟ್ವಿಟ್ಟರ್’ನಲ್ಲಿ ಡಿ ಬಾಸ್ ಜತೆಗಿನ ಸೆಲ್ಫಿ ಪೋಸ್ಟ್ ಮಾಡಿದ್ದೇಕೆ? ಬೆಂಗಳೂರು, ಮಾರ್ಚ್ 03, 2021 (..):ನಟಿ ರಶ್ಮಿಕಾ ಮಂದಣ್ಣ ದರ್ಶನ್​ ಜೊತೆ ಯಜಮಾನ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ತೆಗೆದುಕೊಂಡಿರುವ ಸೆಲ್ಫಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಈ ಚಿತ್ರ ಹಂಚಿಕೊಳ್ಳಲು ಕಾರಣ ರಶ್ಮಿಕಾ ಹಾಗೂ ದರ್ಶನ್​ ಅಭಿನಯದ ಯಜಮಾನ ಸಿನಿಮಾ ರಿಲೀಸ್ ಆಗಿ 2 ವರ್ಷ ಕಳೆದಿರುವುದು. ಚಿತ್ರದ ಶೂಟಿಂಗ್ ​ವೇಳೆ ತೆಗೆದ ಎರಡು ಫೋಟೋಗಳನ್ನು ರಶ್ಮಿಕಾ ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಯಾವಾಗಲು ರಶ್ಮಿಕಾ ಕುರಿತು ಟ್ರೋಲ್ ಮಾಡುವ ನೆಟ್ಟಿಗರು ಇದೀಗ ಹೊಸ ಪೋಸ್ಟ್​ ನೋಡಿ ಖುಷಿಯಾಗಿದ್ದಾರೆ. ದರ್ಶನ್​ ಅಭಿಮಾ