ಕರೋನಾ ಕಲಿಸಿದ ಜೀವನ ಪಾಠ: ಕೃಷಿ ಮತ್ತು ಉದ್ಯಮದಲ್ಲಿ ಸಾಧನೆಗೈದ ಬ್ಯಾಂಕ್ ಉದ್ಯೋಗಿ…. ಕೊಪ್ಪಳ,ಮಾರ್ಚ್,2,2021(..):ಕೊರೋನಾ ಮಹಾಮಾರಿ ಮತ್ತು ಲಾಕ್ ಡೌನ್ ನಿಂದಾಗಿ ದೇಶದ ಜನರು ತತ್ತರಿಸಿ ಹಲವು ಮಂದಿ ಉದ್ಯೋಗ ಕಳೆದು ಕೊಂಡರೇ ಕೂಲಿ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಈ ಮಧ್ಯೆ ಕರೋನಾ ಜನರನ್ನ ಸಂಕಷ್ಟಕ್ಕೆ ದೂಡಿದ್ದಲ್ಲದೇ ಹಲವು ಪಾಠಗಳನ್ನ ಕಲಿಸಿದೆ. ಹೌದು ಇದಕ್ಕೆ ಸಾಕ್ಷಿ ಎಂಬಂತೆ ಬ್ಯಾಂಕ್ ಉದ್ಯೋಗಿ ಮುರಾದ್ ಬೇಗ್ ಎಂಬುವವರು ಕೃಷಿ ಮತ್ತು ಉದ್ಯಮದಲ್ಲಿ ತೊಡಗಿ ಸಾಧನೆಗೈದಿದ್ದಾರೆ. ಮೂಲತಹ ಗಂಗಾವತಿ ನಗರದವರಾದ ಮುರಾದ್ ಬೇಗ ಅವರು ಬಿಕಾಂ ಪದವೀಧರರು. ಹಲವಾರು ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕರೋನಾ ಪ್ರಾರಂಭವಾದ ಕಾಲದಲ್ಲಿ ಅಮೇರಿಕನ್ ಎಕ್ಸ್ಪ್ರೆಸ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ನಿಂದಾಗಿ ಹಲವಾರು ಜನರು ನೌಕರಿ ವಂಚಿತರಾದರು. ಅದರಂತೆ ಬೆಂಗಳೂರಿನಿಂದ ನೇರವಾಗಿ ಗಂಗಾವತಿಗೆ ಆಗಮಿಸಿದ ಬೇಗ್ ಅವರು 4 ಎಕರೆ ಭೂಮಿಯನ್ನು ಲಾವಣಿ ಹಿಡಿದು ಕೃಷಿಗೆ ನಿಂತರು. ಕೆಲಸ ಮಾಡುತ್ತಿದ್ದ ಬ್ಯಾಂಕ್ ನಿಂದ 6 ಲಕ್ಷ ಸಾಲ ಪಡೆದು ಸಮಗ್ರ ಕೃಷಿಯತ್ತ ವಾಲಿದರು. ಬ್ಯಾಂಕ್ ವಹಿವಾಟು ಅರಿವಿದ್ದ ಅವರು ಕೇವಲ ಬೆಳೆ ಬೆಳೆದರೆ ಸಾಲದು ಉದ್ಯಮಿಯಾಗಿ ಬದಲಾಗಬೇಕು ಎಂದುಕೊಂಡು ವಿವಿಧ ತರಕಾರಿ ಸೊಪ್ಪು ಕಾಯಿಪಲ್ಯಗಳನ್ನು ಬೆಳೆಯಲು ಪ್ರಾರಂಭಿಸಿದರು. ನಂತರ ಬಹುಬೇಡಿಕೆಯ ಜವಾರಿ ಕೋಳಿ, ಕಡಕ್ನಾಥ್, ಟರ್ಕಿ ಕೋಳಿ ಹಾಗೂ ಕೌಜಗನ ಹಕ್ಕಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರತಿ ತಿಂಗಳು ಸಾವಿರದ ಐನೂರು ಕೌಜಗ ಹಕ್ಕಿಗಳನ್ನು ಮಾರಾಟ ಮಾಡುತ್ತಿರುವ ಇವರು ಮುಂದಿನ ದಿನಗಳಲ್ಲಿ 4000 ಹಕ್ಕಿಗಳನ್ನು ಮಾರುವ ಗುರಿ ಹೊಂದಿದ್ದಾರೆ. ಕನಿಷ್ಠ ಒಂದು ಹಕ್ಕಿಗೆ 10 ರೂ ಲಾಭ ಉಳಿದರು ತಿಂಗಳಿಗೆ 40000 ಸಂಪಾದನೆ ಮಾಡಬಹುದು ಎಂಬುದು ಇವರ ಲೆಕ್ಕಾಚಾರ. ಟರ್ಕಿ ಕೋಳಿಯ ಮೊಟ್ಟೆಗೆ ಬೇಡಿಕೆ ಇದ್ದು ಸದ್ಯ ಒಂದು ಮೊಟ್ಟೆಯ ಬೆಲೆ 100ರು. ಎಲ್ಲಾ ಕೃಷಿ ತ್ಯಾಜ್ಯಗಳನ್ನು ಸಂಗ್ರಹಿಸಿ ಎರೆಹುಳು ಗೊಬ್ಬರವಾಗಿ ಪರಿವರ್ತಿಸಿ ಮಾರಾಟ ಮಾಡಲು ಸೂಕ್ತವಾಗುವಂತೆ 6 ಎರೆಹುಳು ತೊಟ್ಟಿಗಳನ್ನು ನಿರ್ಮಾಣ ಮಾಡಿದ್ದಾರೆ. ಅನೇಕ ವಾಣಿಜ್ಯ ಬೆಳೆಗಳನ್ನು ಬೆಳೆದು ಕೃಷಿ ಲಾಭದಾಯಕ ಎಂದು ರೈತರಿಗೆ ಮನವರಿಕೆ ಮಾಡಿಕೊಡುವ ಅಭಿಲಾಷೆ ಮುರಾದ ಬೇಗ್ ಅವರದ್ದಾಗಿದೆ. ಪ್ರಸ್ತುತಿ: ಡಾ. ಪಿ. ಆರ್ ಬದರಿಪ್ರಸಾದ್ …. ‘ : , 02, 2021 (..): -19 , . . , . . -19 . , . 4- . . 6 . . . , , . 1,500 4,000 . .10 .40,000 . . 100 . . .: / // / / -19 : - - –- – – .