ನಾಳೆ ಅಂಗನವಾಡಿ ಕಾರ್ಯಕರ್ತೆಯರಿಂದ ಬೃಹತ್ ಪ್ರತಿಭಟನಾ ರ್ಯಾಲಿ… ಬೆಂಗಳೂರು,ಮಾರ್ಚ್,1,2021(..):ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಳೆ ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಿದ್ದಾರೆ. ಸೇವಾಹಿರಿತನದ ಮೇಲೆ ಗೌರವ ಧನ ಹೆಚ್ಚಳ, ಉಚಿತ ವೈದ್ಯಕೀಯ ಸೌಲಭ್ಯ ಅಥವಾ ಇಎಸ್ ಐ ಸೌಲಭ್ಯ, ಎಲ್ ಕೆಜಿ ಮತ್ತು ಯುಕೆಜಿಯನ್ನ ಅಂಗನವಾಡಿಯಲ್ಲೇ ಪ್ರಾರಂಭಿಸುವುದು. ಪಿಂಚಿಣಿ ಸೇವೆ ಸೇರಿ 7 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಅಂಗನವಾಡಿ ಕಾರ್ಯಕರ್ತೆಯರು ಬೀದಿಗಿಳಿಯಲಿದ್ದಾರೆ. ಬೆಂಗಳೂರಿನ ಕೆಎಸ್ ಆರ್ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಪ್ರತಿಭಟನಾರ್ಯಾಲಿ ನಡೆಸಲಿದ್ದಾರೆ. : - - –-