ಜನಸಾಮಾನ್ಯರಿಗೆ ಶಾಕ್: ಗ್ಯಾಸ್ ಸಿಲಿಂಡರ್ ದರ ಮತ್ತೆ ಏರಿಕೆ… ಬೆಂಗಳೂರು,ಮಾ,1,2021(..): ದೇಶದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು ಈಗಾಗಲೇ ಜನ ತತ್ತರಿಸಿದ್ದಾರೆ. ಈ ಮಧ್ಯೆ ಮತ್ತೆ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಗ್ಯಾಸ್ ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ಗೆ ಇಂದಿನಿಂದ 25 ರೂ ಹೆಚ್ಚಳ ಮಾಡಲಾಗಿದೆ. ಈ ಮೂಲಕದ ಒಂದೇ ತಿಂಗಳಲ್ಲಿ ಗ್ಯಾಸ್ ಸಿಲಿಂಡರ್ ದರ 125ರೂ ಏರಿಕೆಯಾಗಿದೆ. 797ರೂ ಇದ್ದ ಸಿಲಿಂಡರ್ ದರ 822ರೂ. ಗೆ ಏರಿಕೆ‌ಯಾಗಿದೆ. ಕಮರ್ಷಿಯಲ್ ಸಿಲಿಂಡರ್ ದರದಲ್ಲೂ ಏರಿಕೆಯಾಗಿದೆ ಇಂದಿನಿಂದ ಕಮರ್ಷಿಯಲ್ ಸಿಲಿಂಡರ್ ಬೆಲೆ ‌96ರೂ.ಏರಿಕೆ ಕಂಡಿದೆ. ಈ ಮೂಲಕ 1570 ರೂಪಾಯಿ ಇದ್ದ ಕಮರ್ಶಿಯಲ್ ಸಿಲೆಂಡರ್ 1666ಕ್ಕೆ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ , ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ನಿರಂತರ ಏರಿಕೆಯಿಂದಾಗಿ ದೇಶದ ಜನಸಾಮಾನ್ಯರು ತತ್ತರಿಸಿದ್ದಾರೆ. ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. … : , 1, 2021 (..): . . .25. .125 . .797 .822. .96. .1570 .1666 . .: / / / / : – - - - .