ಕಾಂಗ್ರೆಸ್ ನ ಕೆಲ ಸದಸ್ಯರು‌ ನನ್ನ ಬೆಳವಣಿಗೆಯನ್ನ ಸಹಿಸುತ್ತಿಲ್ಲ : ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಮೈಸೂರು,ಫೆಬ್ರವರಿ,28,2021(..) :ಕಾಂಗ್ರೆಸ್ ನ ಕೆಲ ಸದಸ್ಯರು‌ ನನ್ನ ಬೆಳವಣಿಗೆಯನ್ನ ಸಹಿಸುತ್ತಿಲ್ಲ. ನನ್ನ ಮೇಲೆ ಸಿದ್ದರಾಮಯ್ಯ ನವರ ಬಳಿ ಇಲ್ಲಸಲ್ಲದ ದೂರು ನೀಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಈಗ ಜೆಡಿಎಸ್ ಗೆ ಬೆಂಬಲ ‌ನೀಡಿದ್ದೇನೆ. ಸಾರಾ ಮಹೇಶ್ ಮೇಲಿನ ಅಭಿಮಾನದಿಂದ ಜೆಡಿಎಸ್ ಸೇರ್ಪಡೆ ಗೊಂಡಿದ್ದೇನೆ ಎಂದು ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಹೇಳಿದ್ದಾರೆ. ಮಾಜಿ ಶಾಸಕ ವಾಸು ಬೆಂಬಲಿಗ, ಪಕ್ಷೇತರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಸೆಮೀವುಲ್ಲಾ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕಳೆದ ಎರಡು ವರ್ಷದ ಮೇಯರ್ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿಸಿದ್ದೆ. ಕಾಂಗ್ರೆಸ್ ಕೆಲ ಸದಸ್ಯರ ಕಿರುಕುಳದಿಂದ ಜೆಡಿಎಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. : - - - - -..