ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಯುವ ಜನತಾ ದಳ ಕಾರ್ಯಕರ್ತರಿಂದ ಧರಣಿ ಮಂಗಳೂರು,ಫೆಬ್ರವರಿ,28,2021(..): ಸಚಿವ ಸಿ.ಪಿ.ಯೋಗೇಶ್ವರ್ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಮಂಗಳೂರಿನಲ್ಲಿ ಯುವ ಜನತಾ ದಳದ ಕಾರ್ಯಕರ್ತರಿಂದ ಸಚಿವ ಸಿ.ಪಿ.ಯೋಗೇಶ್ವರ್ ಉಳಿದಿದ್ದ ಹೋಟೆಲ್ ಬಳಿ ಧರಣಿ.ಮಾಹಿತಿ ತಿಳಿದು ಸಿ.ಪಿ.ಯೋಗೇಶ್ವರ್ ಹೋಟೆಲ್ ಗೆ ಮರಳದೇ ವಿಮಾ ನಿಲ್ದಾಣಕ್ಕೆ ತೆರಳಿದ್ದಾರೆ. ಧರಣಿ ನಿರತ ಯುವ ಜನತಾ ದಳ ಕಾರ್ಯಕರ್ತರು ಸಚಿವರು ಹೆದರಿ ಓಡಿ ಹೋದರು ಎಂದು ಘೋಷಣೆಗಳನ್ನು ಕೂಗಿದ್ದಾರೆ ಎಂದು ತಿಳಿದು ಬಂದಿದೆ. : -..-----