ಅಕ್ರಮವಾಗಿ ಸಂಗ್ರಹಿಸಿದ್ಧ ಜಿಲೆಟಿನ್ ಕಡ್ಡಿ ಜಪ್ತಿ: ನಾಲ್ವರ ಬಂಧನ… ಬೆಳಗಾವಿ ,ಫೆಬ್ರವರಿ,27,2021(..):ಬೆಳಗಾವಿಯ ಕುಲಗೋಡ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ 158 ಜಿಲಿಟಿನ್ ಕಡ್ಡಿಯನ್ನ ಜಪ್ತಿ ಮಾಡಿ, ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಗೃಹಸಚಿವರು ಹಾಗೂ ಗಣಿ ಸಚಿವರ ಖಡಕ್ ಸೂಚನೆಯ ಮೇರೆಗೆ ರಾಜ್ಯದಲ್ಲಿ ಜಿಲಿಟಿನ್ ಅಕ್ರಮ ಸಂಗ್ರಹಣೆಯ ವಿರುದ್ಧ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ನಡುವೆ ಬೆಳಗಾವಿಯ ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದಲ್ಲಿ ಅಕ್ರಮವಾಗಿ ಜಿಲಿಟಿನ್ ಕಡ್ಡಿಗಳನ್ನು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 158 ಜಿಲಿಟಿನ್ ಕಡ್ಡಿ, 51 ಇಡಿ ಕೇಬಲ್ ಹಾಗೂ ಬ್ಲಾಸ್ಟರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಜಿಲೆಟಿನ್ ಕಡ್ಡಿ ಅಕ್ರಮ ಸಂಗ್ರಹಣೆಯಲ್ಲಿ ತೊಡಗಿದ್ದ ಗಿರಿಮಲ್ಲಪ್ಪ, ರಾಜೇಶ್ ಬಡಿಗೇರ, ಭೀಮಪ್ಪ ಹೆಗಡೆ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : – -- –-