ನಾನು ಯಾವುದಕ್ಕೂ ಹೆದರಲ್ಲ: ಅಮಾನತು ಮಾಡಿದ್ರೂ ಸಿದ್ಧ- ಶಾಸಕ ತನ್ವೀರ್ ಸೇಠ್…. ಮೈಸೂರು,ಫೆಬ್ರವರಿ,27,2021(..):ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಜೆಡಿಎಸ್ ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಏಕಪಕ್ಷೀಯ ನಿರ್ಧಾರ ಆರೋಪದ ಮೇಲೆ ಶಾಸಕ ತನ್ವೀರ್ ಸೇಠ್ ಅವರ ಅಮಾನತು ಮಾಡುವಂತೆ ಕಾಂಗ್ರೆಸ್ ನಲ್ಲಿ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಮೈಸೂರುನಲ್ಲಿ ಮಾತನಾಡಿ ಟಾಂಗ್ ನೀಡಿರುವ ಶಾಸಕ ತನ್ವೀರ್ ಸೇಠ್, ನಾನು ಯಾವುದಕ್ಕೂ ಹೆದರಲ್ಲ ಅಮಾನತು ಮಾಡಿದರೂ ನಾನು ಎದುರಿಸಲು ಸಿದ್ಧನಿದ್ದೇನೆ. ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆ ಮಾಡುವುದು ನಡೆಯುತ್ತಿದೆ. ಒಬ್ಬ ವ್ಯಕ್ತಿಯ ಗೌರವ ಅಲ್ಲ. ನಾನು 5 ಬಾರಿ ಗೆದ್ದಿದ್ದೇನೆ. ಒಬ್ಬರ ಗೌರವಕ್ಕಾಗಿ ಎಲ್ಲರ ಗೌರವ ಹರಾಜು ಹಾಕಲು ಆಗಲ್ಲ ಎಂದು ತಿರುಗೇಟು ನೀಡಿದ್ದಾರೆ. ನಿನ್ನೆಯ ಸುದ್ಧಿಗೋಷ್ಠಿ ಗೊಂಬೆಯ ಆಟ: ಗೊಂಬೆ ಆಡಿಸಿದವರ ಬಗ್ಗೆಯೂ ಪಕ್ಷದ ಗಮನಕ್ಕೆ ತರುತ್ತೇನೆ ನಿನ್ನೆ ಪಾಲಿಕೆ ಕಾಂಗ್ರೆಸ್ ಸದಸ್ಯರ ಸುದ್ಧಿಗೋಷ್ಠಿ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ನಿನ್ನೆಯ ಸುದ್ಧಿಗೋಷ್ಠಿ ಗೊಂಬೆಯ ಆಟ. ಯಾರೋ ಗೊಂಬೆ ಆಟ ಆಡಿಸಿದ್ದಾರೆ. ಗೊಂಬೆ ಆಡಿಸಿದವರು ಯಾರು ಅಂತಾ ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ. ಗೊಂಬೆ ಆಡಿಸಿದವರ ಬಗ್ಗೆಯೂ ಪಕ್ಷದ ಗಮನಕ್ಕೆ ತರುತ್ತೇನೆ. ನನ್ನ ವಿರುದ್ಧ ಕ್ರಮ ಕೈಗೊಂಡರೇ ಪರಿಣಾಮ ಎದುರಿಸಲು ಸಿದ್ಧರಾಗಬೇಕು ಎಂದರು. ಸೋಮವಾರ ಡಿ.ಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿ ವರದಿ ನೀಡುವೆ. ನನ್ನನ್ನ ರಾಜಕೀಯವಾಗಿ ಮುಗಿಸಲು ನನ್ನ ಜನರು ಬಿಡಲ್ಲ. ನನ್ನನ್ನ ರಾಜಕೀಯವಾಗಿ ಮುಗಿಸಲು ಯಾರಿಂದಲೂ ಆಗಲ್ಲ. ನನ್ನನ್ನ ನೇರವಾಗಿ ಕೆಣಕಿದರೇ ಸುಮ್ಮನಿರಲ್ಲ. ಬೇರೆಯವರ ವರ್ಚಸ್ಸು ನೋಡಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಿದ್ರೆ ಅದನ್ನ ನನ್ನ ಮೇಲೆ ಹಾಕುತ್ತಿದ್ದರು ಎಂದು ಶಾಸಕ ತನ್ವೀರ್ ಸೇಠ್ ಕಿಡಿಕಾರಿದರು. …. : – , . 27, 2021 (..): - ’ . . “ . ’ . . ’ ’ ’ ,” . ’ , , . “ . , ,” .: / / : ’ - - – --- .