ಬಿಜೆಪಿ ಸರ್ಕಾರ ಬೆಲೆ ಏರಿಕೆ, ತೆರಿಗೆಯ ಮೂಲಕ ಜನರ ಜೀವ ಹಿಂಡುತ್ತಿದೆ : ರಾಜ್ಯ ಕಾಂಗ್ರೆಸ್ ಟ್ವೀಟ್ ಬೆಂಗಳೂರು,ಫೆಬ್ರವರಿ,26,2021(..) :ಯುಪಿಎ ಅವಧಿಯಲ್ಲಿ ಸಣ್ಣ ಬೆಲೆ ಏರಿಕೆಗೂ ದೊಡ್ಡ ಮಟ್ಟದಲ್ಲಿ ಬೀದಿಗಿಳಿಯುತ್ತಿದ್ದ ಬಿಜೆಪಿ ಈಗ ತನ್ನದೇ ಆಡಳಿತದಲ್ಲಿ ಬೆಲೆ ಏರಿಕೆ, ತೆರಿಗೆಯ ಮೂಲಕ ಜನರ ಜೀವ ಹಿಂಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಪೈಪೋಟಿಗೆ ಬಿದ್ದು ಜನಸಾಮಾನ್ಯರ ಬದುಕು ದುರ್ಭರಗೊಳಿಸುತ್ತಿವೆ. “ಬಿಜೆಪಿ ಸಾಹ್ವಾಸ ಮೂರ್ ಹೊತ್ತೂ ಉಪ್ವಾಸ” ಎಂದು ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಲಾಗಿದೆ. : - --’-----