ವಿದೇಶಿ ನೆಲದಲ್ಲಿ ‘ ಕನ್ನಡ ಕಲಿ ‘ ಕೆ ಗೆ ಗ್ರೀನ್ ಸಿಗ್ನಲ್.. ಮೈಸೂರು, ಫೆ.26, 2021 : (.. )ಅಮೇರಿಕಾದ ಫ್ರೆಮೊಂಟ್ ಯೂನಿಯನ್ ಹೈಸ್ಕೂಲ್ ಡಿಸ್ಟಿಂಕ್ಟ್, ಮಿಲ್ಪಿಟಸ್ ಹಾಗೂ ಕ್ಯುಪರ್‌ಟಿನೊ ಕೇಂದ್ರದ ‘ಕನ್ನಡ ಕಲಿ ಹೆಚ್‌ಎಸ್‌ಸಿಪಿ (ಹೈಸ್ಕೂಲ್ ಕ್ರೆಡಿಟ್ ಪ್ರೋಗ್ರಾಂ)’ ವೇದಿಕೆಯು, ೨೦೨೦ರ ಮಾರ್ಚ್ನಲ್ಲಿ ಕನ್ನಡವನ್ನು ವಿದೇಶಿ ಭಾಷೆಯನ್ನಾಗಿ ಕಲಿಸಲು ಸಲ್ಲಿಸಿದ್ದ ಅರ್ಜಿಯನ್ನು ಜೂನ್ ೨೦೨೦ರಲ್ಲಿ ಅನುಮೋದಿಸಲಾಗಿದೆ.ಈ ಪ್ರಕಾರವಾಗಿ ಅಮೇರಿಕಾದ ಆ ಪ್ರಾಂತ್ಯದಲ್ಲಿ ಕನ್ನಡವನ್ನು ವಿದೇಶಿ ಭಾಷೆಯನ್ನಾಗಿ ಕಲಿಸಲು ಅಲ್ಲಿನ ಪ್ರಾಧಿಕಾರ ಅನುಮೋದಿಸಿದ್ದು, ಕನ್ನಡ ವಿದೇಶದಲ್ಲಿ ಡಿಂಡಿಮ ಭಾರಿಸಿದೆ.ಈ ಪ್ರಸ್ತಾವನೆಯನ್ನು ಸಲ್ಲಿಸಿದ್ದ ಹೈಸ್ಕೂಲ್ ಸಮಿತಿ ಒಳಗೊಂಡಿದ್ದ ಸದಸ್ಯರಲ್ಲಿ ಜ್ಯೋತಿ ಸರಗೂರು, ಸಂಧ್ಯಾ ಗಾಯಿತ್ರಿ, ನಿರುಪಮಾ ಬಾಯರ್, ವಸುಧಾ ಹೆಗ್ಡೆ, ಜ್ಯೋತಿ ಶೇಖರ್ ಹಾಗೂ ಮಹಾಂತೇಶ್ ಎಂ.ಸಿ. ಅವರು ಇದ್ದಾರೆ.ಅಮೇರಿಕಾದ ಯಾವುದಾದರೂ ಎಫ್‌ಯುಹೆಚ್‌ಎಸ್‌ಡಿ ಹೈಸ್ಕೂಲುಗಳಲ್ಲಿ ನಿಮ್ಮ ಮಕ್ಕಳು ಓದುತ್ತಿದ್ದರೆ ಅವರಿಗೆ ಕನ್ನಡವನ್ನು ವಿದೇಶಿ ಭಾಷೆಯನ್ನಾಗಿ ಓದುವ ಅವಕಾಶ ದೊರೆಯುತ್ತದೆ. ಇಂತಹವರು ಹೋಮಸ್ಟೀಡ್, ಫ್ರೆಮೊಂಟ್, ಮಾಟಾ ವಿಸ್ಟಾ, ಕ್ಯುಪರ್‌ಟಿನೊ, ಲಿನ್‌ಬ್ರೂಕ್ ಹೈಸ್ಕೂಲ್ಸ್ನಲ್ಲಿ ತಮ್ಮ ಶಾಲೆಗಳ ಸಂಬಂಧಪಟ್ಟ ಆಪ್ತಸಮಾಲೋಚಕರಿಂದ ಮುಂಚಿತ ಅನುಮೋದನೆ ಪಡೆದು ‘ಕನ್ನಡ ಕಲಿ’ ಹೆಚ್‌ಎಸ್‌ಸಿಪಿ (ಹೈಸ್ಕೂಲ್ ಕ್ರೆಡಿಟ್ ಪ್ರೋಗ್ರಾಂ)ಗೆ ನೋಂದಾಯಿಸಿಕೊಳ್ಳಬಹುದು. ನೋಂದಣಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ://./hscp_registration. …. , . 26, 2021 (..): ‘ ’ ( ), , , 2020 2020. . , , , , , . , - ’ , , , , , ’ . ://./hscp_registration.: / / / : ------