ಈ ಜನ್ಮದಲ್ಲಿ ಸಿದ್ಧರಾಮಯ್ಯ ಸಿಎಂ ಆಗುವ ಕನಸು ಈಡೇರಲ್ಲ- ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ… ಬಾಗಲಕೋಟೆ,ಫೆಬ್ರವರಿ,26,2021(..):ಸಿದ್ಧರಾಮಯ್ಯ ಹಗಲು ರಾತ್ರಿ ಸಿಎಂ ಆಗಬೇಕೆಂಬ ಕನಸು ಕಾಣುತ್ತಿದ್ದಾರೆ. ಆದರೆ ಅವರ ಕನಸು ಈ ಜನ್ಮದಲ್ಲಿ ಈಡೇರಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. ಮಾಧ್ಯಮಗಳ ಜತೆ ಇಂದು ಮಾತನಾಡಿ ಸಿದ್ಧರಾಮಯ್ಯ ವಿರುದ್ಧ ಗುಡುಗಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ಧರಾಮಯ್ಯ ಹೋದಲೆಲ್ಲಾ ನಾನು ಸಿಎಂ ಆಗ್ತೇನೆ ಎಂದು ಹೇಳ್ತಾರೆ. ಹಗಲು ರಾತ್ರಿ ಕನಸು ಕಾಣ್ತಾರೆ.ಆದರೆ ಅವರು ಆಸೆ ಈ ಜನ್ಮದಲ್ಲಿ ಈಡೇರಲ್ಲ ಎಂದು ಭವಿಷ್ಯ ನುಡಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ರೂ ಸಿದ್ಧರಾಮಯ್ಯಗೆ ಇನ್ನು ಬುದ್ಧಿ ಬಂದಿಲ್ಲ ಎಂದು ಲೇವಡಿ ಮಾಡಿದರು. ಪೆಟ್ರೋಲ್ ಡೀಸೆಲ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದೆ. ಬೆಲೆ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರ ಗಮನಿಸುತ್ತಿದೆ. ದರ ಕಡಿಮೆ ಮಾಡುವುದು ಕೇಂದ್ರ ಸರ್ಕಾರದ ಕೈಯಲ್ಲಿಲ್ಲ. ಸಾಧ್ಯವಾದಷ್ಟು ಕಡಿಮೆ ಮಾಡುತ್ತದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. : - – – - - -