ತಮ್ಮನ ಆತ್ಮಹತ್ಯೆ ವಿಚಾರ ತಿಳಿದು ಅಣ್ಣನೂ ನೇಣಿಗೆ ಶರಣು…. ಮೈಸೂರು,ಫೆಬ್ರವರಿ,26,2021(..):ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದ ವಿಷಯ ತಿಳಿದು ಅಣ್ಣನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಎಲೆಗುಂಡಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ವೆಂಕಟೇಶ್(28), ಹರೀಶ್(26) ಮೃತಪಟ್ಟ ಅಣ್ಣತಮ್ಮಂದಿರು. ರೈತನಾಗಿದ್ದ ಹರೀಶ್​ ಟ್ರ್ಯಾಕ್ಟರ್ ಚಾಲಕನಾಗಿದ್ದ. ಈ ಮಧ್ಯೆ ಹರೀಶ್ ಟ್ರ್ಯಾಕ್ಟರ್ ರ್ಯಾಶ್ ಡ್ರೈವ್ ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಹರೀಶ್ ಗೆ ತಂದೆ ಚಿನ್ಮಯಿಗೌಡ ಹಾಗೂ ಅಣ್ಣ ವೆಂಕಟೇಶ್ ಬುದ್ಧಿವಾದ ಹೇಳಿದ್ದರು. ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಅಣ್ಣ ವೆಂಕಟೇಶ್ ತಮ್ಮನಿಗೆ ಕರೆಮಾಡಿ ಬುದ್ದಿವಾದ ಹೇಳಿದ್ದನು. ಆದರೆ ಆತ್ಮೀಯನಾಗಿದ್ದ ಅಣ್ಣ ಬೈದ ಹಿನ್ನೆಲೆಯಲ್ಲಿ ಹರೀಶ್ ನೇಣಿಗೆ ಶರಣಾಗಿದ್ದಾನೆ. ಈ ನಡುವೆ ತಮ್ಮ ನೇಣು ಬಿಗಿದುಕೊಂಡಿರುವ ದೃಶ್ಯಗಳನ್ನು ಸ್ನೇಹಿತರು ಅಣ್ಣ ವೆಂಕಟೇಶ್ ಮೊಬೈಲ್ ಫೋನ್ ​ಗೆ ಕಳುಹಿಸಿದ್ದರು. ವಿಡಿಯೋ ನೋಡಿದ ವೆಂಕಟೇಶ್, ತಮ್ಮ ಹರೀಶ್ ಸಾವಿಗೆ ನಾನೇ ಕಾರಣವಾದೆ ಎಂದು ಭಾವಿಸಿ ಊರಿಗೆ ಬರುವ ಬದಲು ಸರಗೂರು ರಸ್ತೆ ಕಡೆ ಹೋಗಿ ತಾನೂ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. …. .. , . 26, 2021 (..): , .. , . (28) (26), .. . . . , . ’ . . . .. .: / / .. : - - - -.